ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

5 ಬಾರಿ ಶೇ 100 ಫಲಿತಾಂಶ: ಶಿಕ್ಷಕಿ ಎಸ್.ಎಸ್.ರಂಜಿನಿ ಕಾರ್ಯಕ್ಕೆ ಮೆಚ್ಚುಗೆ

ಐಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಎಸ್.ಎಸ್.ರಂಜಿನಿ
Published : 5 ಸೆಪ್ಟೆಂಬರ್ 2024, 6:51 IST
Last Updated : 5 ಸೆಪ್ಟೆಂಬರ್ 2024, 6:51 IST
ಫಾಲೋ ಮಾಡಿ
Comments

ಸೋಮವಾರಪೇಟೆ: ಇಲ್ಲಿನ ಐಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ವಿಷಯದ ಸಹ ಶಿಕ್ಷಕಿ ಎಸ್.ಎಸ್.ರಂಜಿನಿ ಉತ್ತಮ ಬೋಧನೆಗೆ ವಿದ್ಯಾರ್ಥಿ ವಲಯದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇವರ ವಿಷಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 5 ಬಾರಿ ಶೇ 100ರಷ್ಟು ಫಲಿತಾಂಶ ಶಾಲೆಗೆ ಲಭಿಸಿದೆ.

ಕಳೆದ 17 ವರ್ಷಗಳಿಂದ ವಿಜ್ಞಾನ ಶಿಕ್ಷಿಕಿಯಾಗಿ ಕೆಲಸ ಮಾಡುತ್ತಿರುವ ಇವರು ಈ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಇವರು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಗಣಿತ ಶಿಕ್ಷಕರಾದ ಚಾಲ್ಸ್ ಡಿಸೀಜಾ ಅವರು ಪುಸ್ತಕ ನೋಡದೆ, ಪಾಠ ಮಾಡುತ್ತಿದ್ದುದ್ದನ್ನು ಗಮನಿಸಿದ್ದ ಇವರು, ಮುಂದೆ ಶಿಕ್ಷಕಿಯಾಗುವ ಕನಸು ಕಂಡಿದ್ದರು. ನಂತರ, ಶಿಕ್ಷಕರಾಗಿಯೂ ನೇಮಕವಾದ ಇವರು ಪ್ರಾರಂಭದಿಂದಲೇ ಪುಸ್ತಕ ನೋಡದೆ, ವಿಜ್ಞಾನ ಪಾಠವನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಬಡ್ತಿ ಪಡೆದರೂ, ತೆರಳದೆ ಪ್ರೌಢಶಾಲೆಯಲ್ಲಿ ಮುಂದುವರೆದಿದ್ದಾರೆ. ಇವರ ವಿಷಯದಲ್ಲಿ ಶಾಲೆಗೆ 5 ಬಾರಿ ಶೇಕಡ ನೂರು ಫಲಿತಾಂಶ ಬಂದಿದ್ದು, ಹೆಚ್ಚಿನ ಭಾರಿ ಶೇ 98 ಮತ್ತು ಶೇ 99ರಷ್ಟು ಫಲಿತಾಂಶವನ್ನು ಸಿಕ್ಕಿದೆ.

ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯ ಮಾಡಲು ನೀಡುವ ಹಣವನ್ನು ಸದ್ವಿನಿಯೋಗಪಡಿಸಿಕೊಂಡಿರುವ ಇವರು, ಕೇವಲ ಮಾರ್ಗದರ್ಶನ ಮಾಡುವ ಮೂಲಕ, ನಾಲ್ಕಾರು ಟೇಬಲ್‌ಗಳಲ್ಲಿ ವಿದ್ಯಾರ್ಥಿಗಳೇ ನೇರವಾಗಿ ಪ್ರಯೋಗ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ವಿಷಯದ ಅರಿವಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಅದು ದೀರ್ಘ ಕಾಲದವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದು ಇವರ ಅನಿಸಿಕೆಯಾಗಿದೆ.

ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿರುವ ಶಿಕ್ಷಕಿ ಎಸ್.ಎಸ್.ರಂಜಿನಿ.
ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿರುವ ಶಿಕ್ಷಕಿ ಎಸ್.ಎಸ್.ರಂಜಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT