ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು | ಬಿರುಬಿಸಿಲಿನಲ್ಲಿ ಬ್ಯಾಟಿಂಗ್ ಅಬ್ಬರ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ; ಚಾಣಾಕ್ಷತೆ ಮೆರೆದ ಕೆಲವು ತಂಡಗಳ ಬೌಲರ್‌ಗಳು
Published 2 ಮೇ 2024, 15:22 IST
Last Updated 2 ಮೇ 2024, 15:22 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿಯೂ ಬ್ಯಾಟ್ಸ್‌ಮೆನ್‌ಗಳು ಅದ್ಭುತ ಪ್ರದರ್ಶನ ತೋರಿದರು. 1 ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಜಯ ಗಳಿಸಿದರೆ, 2 ತಂಡಗಳು ಭಾರಿ ಅಂತರದಿಂದ ಎದುರಾಳಿ ತಂಡಗಳನ್ನು ಸೋಲಿಸಿ ಗಮನ ಸೆಳೆದವು.

ತಾಚಮಾಡ ಹಾಗೂ ಕೂತಂಡ ತಂಡಗಳು ನಿಗದಿತ 8 ಓವರ್‌ಗಳಲ್ಲಿ 100 ಗಡಿಯನ್ನು ದಾಟಿದ್ದು ವಿಶೇಷ ಎನಿಸಿತು.

ಇದೇ ರೀತಿ ಬೌಲರ್‌ಗಳೂ ತನ್ನ ಚಾಣಾಕ್ಷತೆಯನ್ನು ಮೆರೆದಿದ್ದು, ಒಟ್ಟು 4 ತಂಡಗಳ ಬೌಲರ್‌ಗಳು ಎದುರಾಳಿಯ 6 ವಿಕೆಟ್‌ಗಳನ್ನು ಹಾಗೂ 1 ತಂಡದ ಬೌಲರ್‌ಗಳು 7 ವಿಕೆಟ್‌ಗಳನ್ನು ಉರುಳಿಸುವಲ್ಲಿ ಸಾಫಲ್ಯತೆ ಕಂಡರು.

ಕೂತಂಡ ತಂಡವು ಚೀರಂಡ ವಿರುದ್ಧ 79 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಕೂತಂಡ ಕೇವಲ 1 ವಿಕೆಟ್ ಕಳೆದುಕೊಂಡು ನೀಡಿದ 123 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೀರಂಡ 43 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ತಾಚಮಾಡ ತಂಡವು ಕೊಲ್ಲೀರ ತಂಡದ ವಿರುದ್ಧ 70 ರನ್‌ಗಳ ಜಯ ಸಾಧಿಸಿತು. ತಾಚಮಾಡ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ನೀಡಿದ 109 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಲೀರ ಗಳಿಸಿದ್ದು ಕೇವಲ 38 ರನ್‌ ಮಾತ್ರ.

ಚೋನೀರ ತಂಡವು ಉದುವೇರ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಪಡೆಯಿತು. ಉದುವೇರ ನೀಡಿದ 42 ರನ್‌ಗಳ ಗುರಿಯನ್ನು ಚೋನೀರ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ತಲುಪಿತು.

ಮುಕ್ಕಾಟಿರ ತಂಡವು ಆಯಲಪಂಡ ವಿರುದ್ಧ 29 ರನ್‌ಗಳ ಜಯ ಪಡೆಯಿತು. ಮುಕ್ಕಾಟಿರ ನೀಡಿದ 99 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಯಲಪಂಡ 69 ರನ್‌ಗಳಿಗೆ ಮಾತ್ರ ಸೀಮಿತವಾಯಿತು.‌

ಚೇನಂಡ ತಂಡವು ಅಪ್ಪಂಡೆರಂಡ ವಿರುದ್ಧ 7 ವಿಕೆಟ್‌ಗಳ ಜಯ ಪಡೆಯಿತು. ಅಪ್ಪಂಡೆರಂಡ ನೀಡಿದ 79 ರನ್‌ಗಳ ಗುರಿಯನ್ನು ಚೇನಂಡ ತಂಡ 3 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

ಉದುವೆರ ತಂಡವು ಅಣ್ಣಕಾರಂಡ ವಿರುದ್ಧ 28 ರನ್‌ಗಳ ಜಯ ಗಳಿಸಿತು. ಉದುವೆರ ನೀಡಿದ 112 ರನ್‌ಗಳ ಗುರಿಯನ್ನು ಬೆನ್ನತ್ತಿದ ಅಣ್ಣಕಾರಂಡ 83 ರನ್‌ಗಳನ್ನಷ್ಟೇ ಗಳಿಸಿತು.

ಚೋನಿರ ತಂಡವು ಮಂಡೆಯಂಡ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿತು. ಮಂಡೆಯಂಡ  ನೀಡಿದ 60 ರನ್‌ಗಳ ಗುರಿಯನ್ನು ಚೋನಿರ ಕೇವಲ 1 ವಿಕೆಟ್ ಮಾತ್ರ ಕಳೆದುಕೊಂಡು ತಲುಪಿತು.

10 ರನ್‌ಗಳ ಜಯ:

ಮಲ್ಚಿರ ತಂಡವು ನೋರೆರ ವಿರುದ್ಧ 10 ರನ್‌ಗಳ ರೋಚಕ ಜಯ ಪಡೆಯಿತು. ಮಲ್ಚಿರ ನೀಡಿದ 78 ರನ್‌ಗಳ ಗುರಿಯನ್ನು ಬೆನ್ನತ್ತಿದ ನೋರೆರ 68 ರನ್‌ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಮನೆಯಪಂಡ ತಂಡ ಸಹ ನೆಲ್ಲೀರ ವಿರುದ್ಧ 10 ರನ್‌ಗಳ ರೋಚಕ ಜಯ ಪಡೆಯಿತು. ಮನೆಯಪಂಡ ನೀಡಿದ 105 ರನ್‌ಗಳ ಗುರಿಯನ್ನು ಬೆನ್ನತ್ತಿದ ನೆಲ್ಲೀರ 94 ರನ್‌ಗಳನ್ನಷ್ಟೇ ಗಳಿಸಿ, ಗೆಲುವಿನ ದಡ ತಲುಪಲಾಗಲಿಲ್ಲ.

ಮಚ್ಚಾಮಾಡ ಹಾಗೂ ಪೋರೆರ ತಂಡಗಳು ವಾಕ್‌ ಓವರ್ ಪಡೆದವು.

ಮುಕ್ಕಾಟಿರ ತಂಡದ ಆಟಗಾರರೊಬ್ಬರ ಬ್ಯಾಟಿಂಗ್ ಪ್ರದರ್ಶನದ ವೈಖರಿ ಹೀಗಿತ್ತು.
ಮುಕ್ಕಾಟಿರ ತಂಡದ ಆಟಗಾರರೊಬ್ಬರ ಬ್ಯಾಟಿಂಗ್ ಪ್ರದರ್ಶನದ ವೈಖರಿ ಹೀಗಿತ್ತು.

ಮಹಿಳೆಯರ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಅಬ್ಬರ ಬಿರು ಬಿಸಿಲಿನಲ್ಲೂ ಬಸವಳಿಯದ ಆಟಗಾರರು

ಮಹಿಳಾ ವಿಭಾಗ ಮಹಿಳಾ ವಿಭಾಗದಲ್ಲಿ ಮುಕ್ಕಾಟಿರ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೇವಲ 30 ಎಸೆತಗಳಲ್ಲಿ ಇದು ಗಳಿಸಿದ್ದು ಬರೋಬರಿ 69 ರನ್‌ಗಳು. ಇದರಿಂದ ಮುಕ್ಕಾಟಿರ ತಂಡಕ್ಕೆ ಪೆಬ್ಬಟ್ಟಿರ ತಂಡದ ವಿರುದ್ಧ 37 ರನ್‌ಗಳ ಗೆಲುವು ಒಲಿಯಿತು. ಮುಕ್ಕಾಟಿರ ನೀಡಿದ 70 ರನ್‌ಗಳ ಗುರಿಯನ್ನು ಬೆನ್ನತ್ತಿದ ಪೆಬ್ಬಟ್ಟಿರ 33 ರನ್‌ಗಳಿಗೆ ಮಾತ್ರವೇ ಸೀಮಿತವಾಯಿತು. ಕೇಲೇಟಿರ ತಂಡವು ತಾಚಮಾಡ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು. ತಾಚಮಾಡ ನೀಡಿದ 30 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡು ಕೇಲೇಟಿರ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT