ಮಡಿಕೇರಿ: ತಾಲ್ಲೂಕಿನ ಭಾಗಮಂಡಲದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡು ಕೆಸರಿನಲ್ಲಿ ಮಿಂದೆದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ವತಿಯಿಂದ ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಮತ್ತು ಅನು ಅವರ ಗದ್ದೆಯಲ್ಲಿ ನಡೆದ 33 ನೇ ವರ್ಷದ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಉಡುಪಿ, ಬೆಂಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಿದ್ದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಕ್ರೀಡಾಕೂಟ ಉದ್ಘಾಟಿಸಿದರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಸರುಗದ್ದೆಯ ಆಟೋಟಗಳನ್ನು ವೀಕ್ಷಿಸಿದರು. ನಂತರ, ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯಶಸ್ ರೈ ಅವರನ್ನು ಸನ್ಮಾನಿಸಿದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಕ್ರೀಡಾ ಸಮಿತಿಯ ಸಂಚಾಲಕ ಕಾವೇರಿ ಮನೆ ಭರತ್, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಜಿ ಪುಷ್ಪಾ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಹೊದ್ದೂರು ಗ್ರಾ.ಪಂ.ಅಧ್ಯಕ್ಷರಾದ ಎಚ್.ಎ.ಹಂಸ, ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಗ್ರಾ.ಪಂ.ಸದಸ್ಯರಾದ ಹೊಸೂರು ಸತೀಶ್ ಕುಮಾರ್, ಮೈ ಭಾರತ್ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ. ಉಲ್ಲಾಸ್, ಭಾಗಮಂಡಲ ಪಿಡಿಒ ಪಿ.ಆರ್.ನಂದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಲೀಡಿಂಗ್ ಎಡ್ಜ್ ಅಡ್ವರ್ ಟೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಡಿಕೇರಿ ಪ್ರಸನ್ನ ಕುಶಾಲಪ್ಪ,ವಿಸ್ಮಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಭಾಗವಹಿಸಿದ್ದರು.

ಫಲಿತಾಂಶ

ಪುರುಷರ ವಿಭಾಗ: ವೀರಾಂಜನೇಯ ತಂಡ ಬಿ.ಸಿ.ರೋಡ್ (ಪ್ರ) ಗಜಾನನ ತಂಡ ಭಾಗಮಂಡಲ (ದ್ವಿ) ಮಹಿಳೆಯರ ವಿಭಾಗ: ಮಹಾದೇವ ತಂಡ ಬಲಮುರಿ (ಪ್ರ) ಅಪೊಲೋ ಬಲ್ಲಮಾವಟಿ (ದ್ವಿ) ವಾಲಿಬಾಲ್: ಪಯಸ್ವಿನಿ ಸಂಪಾಜೆ (ಪ್ರ) ರಂಜು ಫ್ರೆಂಡ್ಸ್ ‘ಎ’ ಹಾಸನ. (ದ್ವಿ). ಥ್ರೋಬಾಲ್: ರಾಜ್ಬಾಬು ಅಭಿಮಾನಿಗಳ ಬಳಗ ಬೆಂಗಳೂರು (ಪ್ರ) ನಾಗಶ್ರೀ ತಂಡ ಸುಳ್ಯ (ದ್ವಿ) ಓಟದ ಸ್ಪರ್ಧೆಗಳು: ಕಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಕೆ.ಎಸ್.ಗಯಾನ್ (ಪ್ರ) ಸಿ.ಪಿ.ಗಾನವ್ (ದ್ವಿ) ಡಿ.ಎ.ಪ್ರತಾಪ (ತೃ) ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಕೃತಿ ಚಿನ್ನಪ್ಪ (ಪ್ರ) ದೃಶ್ಯ ಚಿನ್ನಪ್ಪ (ದ್ವಿ) ಡಿಂಪ (ತೃ) ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಸದಾಶಿವ (ಪ್ರ) ಧನುಷ್ (ದ್ವಿ) ಕಾವೇರಿ ಮನೆ ಚಂದನ (ತೃ) ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಪ್ರಜ್ಞಾ (ಪ್ರ) ಅನನ್ಯಾ (ದ್ವಿ) ಚೈತನ್ಯ (ತೃ) ಪ್ರೌಢಶಾಲಾ ಬಾಲಕರ ವಿಭಾಗ: ಪೂವಣ್ಣ (ಪ್ರ) ಹರ್ಷಿತಾ ಧರ್ಮಸ್ಥಳ (ದ್ವಿ) ಚೆಂಗಪ್ಪ (ತೃ) ಪ್ರೌಢಶಾಲಾ ಬಾಲಕಿಯರ ವಿಭಾಗ: ಚರಿಷ್ಮಾ (ಪ್ರ) ನೀಕ್ಷಾ (ದ್ವಿ) ನೀತು (ತೃ) ಪಿಯು ಕಾಲೇಜು ಬಾಲಕರ ವಿಭಾಗ: ಜನಿತ್ ಬೋಪಣ್ಣ (ಪ್ರ) ನಯನ್ (ದ್ವಿ) ಶೈಲು ಧರ್ಮಸ್ಥಳ (ತೃ) ಪಿಯು ಕಾಲೇಜು ಬಾಲಕಿಯರ ವಿಭಾಗ: ಬಿಂದು (ಪ್ರ) ಕೆ.ಆರ್.ಯಶಿಕಾ (ದ್ವಿ) ಯು.ಎಸ್.ಭವ್ಯಾ (ತೃ) ಪದವಿ ಕಾಲೇಜು ಬಾಲಕರ ವಿಭಾಗ: ಮುರುಳಿ (ಪ್ರ) ಕೀರ್ತನ್ ಕಾಳನ (ದ್ವಿ) ಕೆ.ಟಿ.ಜನನ್ (ತೃ) ಪದವಿ ಕಾಲೇಜು ಬಾಲಕಿಯರ ವಿಭಾಗ: ಲಹರಿ (ಪ್ರ) ಲೀಸಾ (ದ್ವಿ) ಎ.ಆರ್. ರಶ್ಮಿತಾ (ತೃ) ಸಾರ್ವಜನಿಕ ಪುರುಷರ ವಿಭಾಗ: ಸೃಜನ್ (ಪ್ರ) ದಯನ್ (ದ್ವಿ) ಮುರುಳಿ ಪುತ್ತೂರು (ತೃ) ಸಾರ್ವಜನಿಕ ಮಹಿಳೆಯರ ವಿಭಾಗ: ಬಿಂದು (ಪ್ರ) ಕೆ.ಆರ್.ಯಾಶಿಕಾ (ದ್ವಿ) ಚರಿಷ್ಮಾ (ತೃ) ಆಯೋಜಕರ ವಿಭಾಗ: ಸೃಜನ್ (ಪ್ರ) ದಯನ್ (ದ್ವಿ) ಸಂದ್ಯನ್ (ತೃ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.