ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ- ಕರಿಕೆ ನಡುವೆ ಬಸ್ ಸಂಚಾರ

Published 17 ಮಾರ್ಚ್ 2024, 7:05 IST
Last Updated 17 ಮಾರ್ಚ್ 2024, 7:05 IST
ಅಕ್ಷರ ಗಾತ್ರ

ನಾಪೋಕ್ಲು: ಮಡಿಕೇರಿ-ಕರಿಕೆ ನಡುವೆ ಶನಿವಾರದಿಂದ ಹೊಸ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ.ಶುಕ್ರವಾರ ಶಾಸಕ ಎ.ಎಸ್. ಪೊನ್ನಣ್ಣ ಕರಿಕೆಗೆ ಆಗಮಿಸಿದ್ದ ಸಂದರ್ಭ ಬಸ್ ಸೌಲಭ್ಯಬೇಕೆಂಬ ಕೋರಿಕೆಯನ್ನು ಪರಿಗಣಿಸಿ ತಕ್ಷಣವೇ ಬಸ್ ಸಂಚಾರ ಆರಂಭಿಸಲು ಆದೇಶಿಸಿದ್ದಾರೆ.

ಮಡಿಕೇರಿಯಿಂದ 7.30ಕ್ಕೆ ಹೊರಡುವ ಬಸ್ 10.15 ಕ್ಕೆ ಕರಿಕೆ ತಲುಪಲಿದೆ. 10.30 ಕ್ಕೆ ಕರಿಕೆಯಿಂದ ಹೊರಟು ಮಧ್ಯಾಹ್ನ 1-15ಕ್ಕೆ ಮಡಿಕೇರಿ ತಲುಪಲಿದೆ. ಇನ್ನೊಂದು ಬಸ್ ಮಧ್ಯಾಹ್ನ 1ಗಂಟೆಗೆ ಮಡಿಕೇರಿಯಿಂದ ಹೊರಟು 3-45ಕ್ಕೆ ಕರಿಕೆ ತಲುಪಲಿದೆ. ಸಂಜೆ 4ಕ್ಕೆ ಕರಿಕೆಯಿಂದ ಹೊರಟು 6.45ಕ್ಕೆ ಮಡಿಕೇರಿ ತಲುಪಲಿದೆ. ಶನಿವಾರ ಬಸ್ ಸಂಚಾರ ಆರಂಭಗೊಂಡಿದ್ದು ಚಾಲಕ -ನಿರ್ವಾಹಕರನ್ನು ಎಳ್ಳುಕೊಚ್ಚಿಯಲ್ಲಿ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT