ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಲಕ್ಕಿ ಒಣಗಿಸುವ ಪರಿಸರ ಸ್ನೇಹಿ ಯಂತ್ರ

ಕೃಷಿ ವಿಜ್ಞಾನಿ ಎ.ಡಿ.ಮೋಹನ್ ಕುಮಾರ್ ಅವರ ನೂತನ ಆವಿಷ್ಕಾರ
Last Updated 24 ಅಕ್ಟೋಬರ್ 2020, 16:38 IST
ಅಕ್ಷರ ಗಾತ್ರ

ಶನಿವಾರಸಂತೆ: ಏಲಕ್ಕಿ ಬೆಳೆಗಾರರಿಗೆ ಸಂತಸದ ಸುದ್ದಿ ಇದೆ. ಇನ್ನೂ ಮುಂದೆ ಮಳೆಗಾಲದಲ್ಲಿ, ಅಕಾಲಿಕ ಮಳೆ ಏಲಕ್ಕಿ ಒಣಗಿಸುವುದು ಹೇಗೆ? ಎಂಬ ಚಿಂತೆ ಬೇಡ.

ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ. ಡಿ. ಮೋಹನ್ ಕುಮಾರ್ ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಏಲಕ್ಕಿ ಒಣಗಿಸುವ ಯಂತ್ರ ಸಂಶೋಧನೆ ಮಾಡಿದ್ದಾರೆ. ಇದು ಏಲಕ್ಕಿ ಒಣಗಿಸುವ ಯಂತ್ರವಾದರೂ, ಮಳೆಗಾಲದಲ್ಲಿ ಕಾಫಿ, ಕಾಳುಮೆಣಸು, ಹಸಿರು ಮೆಣಸನ್ನು ಯಂತ್ರದ ಮೂಲಕ ಒಣಗಿಸಬಹುದು. ಇದರ ಜತೆಗೆ ಮಳೆಗಾಲದಲ್ಲಿ ಬಟ್ಟೆ ಕೂಡಾ ಒಣಗಿಸಬಹುದು.

ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಗಮನವನ್ನು ಈ ಯಂತ್ರವು ಸೆಳೆದಿದೆ. ಮೋಹನ್ ಕುಮಾರ್ ಅವರು ಪರಿಸರ ಸ್ನೇಹಿ ಯಂತ್ರ ಅವಿಷ್ಕಾರ ಮಾಡಿದ್ದಾರೆ. ಒಂದೂವರೆ ಕ್ವಿಂಟಲ್ ಹಸಿ ಏಲಕ್ಕಿಯನ್ನು ಏಕಕಾಲದಲ್ಲಿ ಒಣಗಿಸಬಹುದು. ಅಡುಗೆ ಅನಿಲದ ಮೂಲಕ 1 ಎಚ್.ಪಿ. ಮೋಟಾರ್ ಚಾಲನೆಗೊಳಿಸಿ ಅದರ ಬಿಸಿ ಗಾಳಿಯಿಂದ ಏಲಕ್ಕಿ ಒಣಗಿಸುವಂತೆ ಯಂತ್ರವನ್ನು ತಯಾರಿಸಿದ್ದಾರೆ.

15 ರಿಂದ 18 ತಾಸುಗಳಲ್ಲಿ ಏಲಕ್ಕಿ ಒಣಗುತ್ತದೆ. ಇದಕ್ಕೆ ಒಂದೂವರೆ ಸಿಲಿಂಡರ್‌ ಗ್ಯಾಸ್ ಬೇಕಾಗುತ್ತದೆ. ₹ 850 ವೆಚ್ಚ ತಗಲುತ್ತದೆ. ಈ ಯಂತ್ರ ತಯಾರಿಕೆಗೆ ₹ 1.20 ಲಕ್ಷ ವೆಚ್ಚ ತಗುಲಿದೆ. ₹ 25 ಸಾವಿರ ವೆಚ್ಚದಲ್ಲೂ 10 ರಿಂದ 15 ಕೆ.ಜಿ.ಏಲಕ್ಕಿ ಒಣಗಿಸುವ ಸಾಮರ್ಥ್ಯದ ಯಂತ್ರ ನಿರ್ಮಿಸಬಹುದು ಎನ್ನುತ್ತಾರೆ ಮೋಹನ್ ಕುಮಾರ್.

ಕೃಷಿ ಜತೆಗೆ ಮೋಹನ್ ಕುಮಾರ್ ಅವರು ವರ್ಕ್ ಶಾಪ್ ನಡೆಸುತ್ತಿದ್ದಾರೆ. ಬಿ.ಕಾಂ.ಪದವೀಧರರಾಗಿರುವ ಇವರು ಸದಾ ರೈತರಿಗೆ, ಬೆಳೆಗಾರರಿಗೆ ಅನುಕೂಲವಾಗುವಂತಹ ಅನ್ವೇಷಣೆ ಮಾಡುವ ಮನೋಭಾವ ಹೊಂದಿದ್ದಾರೆ. ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ತಜ್ಞರ ಮೆಚ್ಚುಗೆಗೆ ಈ ಯಂತ್ರ ಪಾತ್ರವಾಗಿದೆ.

ಮಾಹಿತಿಗೆ ಮೊಬೈಲ್‌ 94489 19518 ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT