ಭಾನುವಾರ, ಸೆಪ್ಟೆಂಬರ್ 20, 2020
24 °C
ಸಾಂಸ್ಕೃತಿಕ ಸಮಿತಿ, ರೋಟರಿ ಮಿಸ್ಟಿ ಹಿಲ್ಸ್ ಸಹಯೋಗ

ಮಡಿಕೇರಿಯಲ್ಲಿ ಅ.2ರಂದು ‘ಮಕ್ಕಳ ದಸರಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅ.2ರಂದು ನಗರದ ಗಾಂಧಿ ಮೈದಾನದಲ್ಲಿ ‘ಮಕ್ಕಳ ದಸರಾ’ ನಡೆಯಲಿದೆ.

ಅಂದು ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಂಚಾಲಕ ಎಚ್.ಟಿ.ಅನಿಲ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9.30ಕ್ಕೆ ಸ್ಪರ್ಧೆಗಳು ಪ್ರಾರಂಭವಾಗಲಿವೆ.

ಮಕ್ಕಳ ಸಂತೆ–ಮಕ್ಕಳ ಅಂಗಡಿ: ಎಸ್ಸೆಸ್ಸೆಲ್ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ. 

ಮಕ್ಕಳ ಮಂಟಪ: 10 ನಿಮಿಷದ ಪ್ರದರ್ಶನವುಳ್ಳ ಮಂಟಪ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು.

ಛದ್ಮವೇಶ ಸ್ಪರ್ಧೆ: ಎಲ್‌ಕೆಜಿಯಿಂದ 1ನೇ ತರಗತಿ, 2ನೇ ತರಗತಿಯಿಂದ 4ನೇ ತರಗತಿ, 5ರಿಂದ 7ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪರ್ಧೆಗಳು ನಡೆಯಲಿದ್ದು, ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ.

ಕ್ಲೇ ಮಾಡೆಲಿಂಗ್: 4ರಿಂದ 6ನೇ ತರಗತಿ ವಿದ್ಯಾಥಿ೯ಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.

ವಿಜ್ಞಾನ ಮಾದರಿಗಳ ಸ್ಪರ್ಧೆ: 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸೈನ್ಸ್ ಮಾಡೆಲಿಂಗ್ ಸ್ಪರ್ಧೆ ಜರುಗಲಿದ್ದು, ಒಂದು ತಂಡದಲ್ಲಿ ಇಬ್ಬರು ವಿದ್ಯಾಥಿ೯ಗಳು ಸ್ಪಧಿ೯ಗಳಾಗಿ ಪಾಲ್ಗೊಳ್ಳಬಹುದು.

ಸ್ಪರ್ಧಿಗಳು ಅಂದು ಬೆಳಿಗ್ಗೆ 9ಕ್ಕೆ ಗಂಟೆಗೇ ಸರಿಯಾಗಿ ಹಾಜರಿರಬೇಕು. ಮಕ್ಕಳ ಸಂತೆ, ಮಕ್ಕಳಿಂದ ಅಂಗಡಿ ಸ್ಪರ್ಧೆ– ಪ್ರಿಯಾ ಜಗದೀಶ್ (94499 15522), ಸಂಧ್ಯಾ ಅಶೋಕ್‌ (98443 32415), ಮಕ್ಕಳ ಮಂಟಪ - ಸವಿತಾ ಅರುಣ್ (94800 03811) ಮಾಲಾ ರೋಷನ್ (9449276299), ಛದ್ಮವೇಶ ಸ್ಪರ್ಧೆ- ಶಫಾಲಿ ರೈ (97415 23484), ಕ್ಲೇ ಮಾಡೆಲಿಂಗ್ - ಶಮ್ಮಿ ಪ್ರಭು (82175 16985)- ಗಾನಾ ಪ್ರಶಾಂತ್ (94497 13748), ವಿಜ್ಞಾನ ಮಾದರಿ  - ವಿಜಯಲಕ್ಷ್ಮಿ ಚೇತನ್ (86180 23154) ಅವರಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನ ಸೆ.27 ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು