ಭಾನುವಾರ, ಜೂನ್ 26, 2022
21 °C
ಚಿಲ್ಲಿ ಸಾಸ್ ಸೋರಿಕೆ: ಫೊಲೀಸರ ಸ್ಪಷ್ಟನೆ

ಸಿದ್ದಾಪುರ: ಲಾರಿಯಿಂದ ಕೆಂಪು ಬಣ್ಣದ ಪದಾರ್ಥ ಸೋರಿಕೆ, 6 ವಿದ್ಯಾರ್ಥಿಗಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ (ಕೊಡಗು ಜಿಲ್ಲೆ): ಲಾರಿ ಸಂಚರಿಸುವ ಸಂದರ್ಭ ರಸ್ತೆಯಲ್ಲಿ ಕೆಂಪು ಬಣ್ಣದ ಪದಾರ್ಥ ಚೆಲ್ಲಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಅಸ್ವಸ್ಥರಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಕುಶಾಲನಗರ ಭಾಗದಿಂದ ಸಿದ್ದಾಪುರದ ಮೂಲಕ ವಿರಾಜಪೇಟೆ ತೆರಳಿದ ವಾಹನದಿಂದ ಕೆಂಪು ಬಣ್ಣದ ದ್ರವ ರಸ್ತೆಯಲ್ಲಿ ಚೆಲ್ಲಿದ್ದು, ಸಾರ್ವಜನಿಕರಿಗೆ ಕೆಮ್ಮು, ಕಣ್ಣು ಉರಿ, ಶೀತ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ವಾಹನದಿಂದ ರಾಸಾಯನಿಕ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ರಸಾಯನಿಕ ಅಲ್ಲ. ಚಿಲ್ಲಿ ಸಾಸ್ ಸೋರಿಕೆಯಾಗಿದೆ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾಪುರದ ಸೆಂಟ್ ಆನ್ಸ್‌ನ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಕೆಲವು ವಿದ್ಯಾರ್ಥಿಗಳಲ್ಲಿ ಉಸಿರಾಟದ ಸಮಸ್ಯೆ ಕಂಡುಬಂದಿದ್ದು, ಆಕ್ಸಿಜನ್ ಪೂರೈಸಲಾಗಿದೆ.

ಸ್ಥಳಕ್ಕೆ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾಧಿಕಾರಿ ಶಶಿಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು