ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಿಯಾಯಿತಿ ದರದಲ್ಲಿ ರೈತರಿಗೆ ತೆಂಗು, ಅಡಿಕೆ ಸಸಿ ಲಭ್ಯ

Published 13 ಜೂನ್ 2024, 3:15 IST
Last Updated 13 ಜೂನ್ 2024, 3:15 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಬಳಗುಂದ ತೋಟಗಾರಿಕೆ ಕ್ಷೇತ್ರ ಮತ್ತು ಕುಶಾಲನಗರ ತಾಲ್ಲೂಕಿನ ಕೂಡಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ತೆಂಗು ಮತ್ತು ಅಡಿಕೆ ಸಸಿಗಳು ಇಲಾಖಾ ದರದಲ್ಲಿ ವಿತರಿಸಲು ಲಭ್ಯ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆಂಗು ಸಸಿವೊಂದಕ್ಕೆ ₹ 75 ಹಾಗೂ ಅಡಿಕೆ ಸಸಿಗೆ ₹ 25 ನಿಗದಿಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ಸಸಿಗಳನ್ನು ನಾಟಿ ಮಾಡಲು ನಿಯಮಾನುಸಾರ ಪ್ರೋತ್ಸಾಹಧನವನ್ನು ನರೇಗಾ ಮುಖಾಂತರ ನೀಡಲು ಅವಕಾಶವಿರುತ್ತದೆ.

 ಮಾಹಿತಿಗಾಗಿ ಬಳಗುಂದ ತೋಟಗಾರಿಕೆ ಕ್ಷೇತ್ರ 9844360764, ಕೂಡಿಗೆ ತೋಟಗಾರಿಕೆ ಕ್ಷೇತ್ರ 8762937704 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT