ಗೋಣಿಕೊಪ್ಪಲು: ಅರಣ್ಯ ಇಲಾಖೆಯ ‘ಆರ್‌ಎಫ್‌ಓ’ ಹಾಗೂ ‘ಡಿಆರ್‌ಎಫ್‌ಓ’ ಹುದ್ದೆಗಳಿಗೆ ಅರಣ್ಯಶಾಸ್ತ್ರವೇ ಕನಿಷ್ಠ ವಿದ್ಯಾರ್ಹತೆ ಆಗಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಮುಷ್ಕರ 5ನೇ ದಿನವಾದ ಮಂಗಳವಾರವೂ ಮುಂದುವರಿಯಿತು.

ತರಗತಿ ಬಹಿಷ್ಕರಿಸಿ ಕಾಲೇಜಿನ ಮೈದಾನದಲ್ಲಿ ‘ವಿ ವಾಂಟ್ ಜಸ್ಟೀಸ್’ ಎಂದು ಘೋಷಣೆ ಕೂಗುವುದರ ಜತೆಗೆ ಮೈದಾನದಲ್ಲಿ ಬಿಸಿಲಿನಲ್ಲಿಯೇ ಮಲಗಿ ಅಕ್ಷರಗಳನ್ನು ಮೂಡಿಸಿ ಹೋರಾಟ ತೀವ್ರಗೊಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಕೃಷಿವಿಜ್ಞಾನ ಮತ್ತು ತೋಟಗಾರಿಕೆ ವಿಜ್ಞಾನ ಪದವಿಯಾಗಿದೆ. ಇದೇ ಮಾದರಿಯಲ್ಲಿ ಅರಣ್ಯ ಇಲಾಖೆಗೂ ಕೂಡ ಅರಣ್ಯಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪೊನ್ನಂಪೇಟೆ, ಇರುವಕ್ಕಿ, ಶಿರಸಿ ಕಾಲೇಜುಗಳ ವಿದ್ಯಾರ್ಥಿ ಮುಖಂಡರು ಮಂಗಳವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ವಿಧಾನಸಭೆ ಅಧಿವೇಶನ ಮುಗಿದ ಕೂಡಲೆ ಇದರ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು ಎಂದು ವಿದ್ಯಾರ್ಥಿ ಮುಖಂಡ ಕಿಶಾನ್ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.