ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕುಮಾರ್ ಆಯ್ಕೆ

Published 11 ಜುಲೈ 2024, 14:54 IST
Last Updated 11 ಜುಲೈ 2024, 14:54 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಕಾರ್ಮಿಕರ ಮತ್ತು ಚಾಲಕರ ಕೊಡಗು ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಜಿ.ಕುಮಾರ್ ಆಯ್ಕೆ ಮಾಡಲಾಯಿತು.

ಇಲ್ಲಿನ ದ್ವಾರಕ ಸಭಾಂಗಣದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಅಣ್ಣಾ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮಹೇಶ್ ಮಾದಪಟ್ಟಣ, ಶಿವಮ್ಮ ಸುಂದರನಗರ,ಸುಲೈಮಾನ್ ನಂಜರಾಯಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್( ಲೋಕಿ) ಸುಂಟಿಕೊಪ್ಪ, ಖಜಾಂಚಿಯಾಗಿ ಮಂಜುನಾಥ್ ಚೆನ್ಕಲ್, ಸಹಕಾರ್ಯದರ್ಶಿಗಳಾಗಿ ಕೃಷ್ಣಕುಟ್ಟಿ, ನಂದಿನಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್.ಸಂದೀಪ್, ಮಂಜುಳ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಇಬ್ರಾಹಿಂ, ರವಿ, ಸಲಂ,ಕವಿತ, ರತ್ನ, ಸುಮಾ, ಸೂರ್ಯ( ಸೂರಿ), ಆನಂದ, ಅನಿಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕೊಡಗು, ಮೈಸೂರು, ಹಾಸನ ಜಿಲ್ಲೆಯ ಕಾವೇರಿ ಕೃಷಿ ಕಾರ್ಮಿಕ ಚಾಲಕರ ಸಂಘ, ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾಗಿ ಅಣ್ಣಾ ಶರೀಫ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಲೋಕೇಶ್
ಲೋಕೇಶ್
ಅಣ್ಣಾ ಶರೀಫ್
ಅಣ್ಣಾ ಶರೀಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT