ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಸಮಯ ಸಡಿಲಿಕೆ; ಜನತೆಗೆ ನಿರಾಳ

Last Updated 26 ಮಾರ್ಚ್ 2020, 13:59 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಗೋಣಿಕೊಪ್ಪಲು : ಐದು ದಿನದ ಹಿಂದಿನವರೆಗೂ ಜನ ಸಂದಣಿ ಮತ್ತು ವಾಹನಗಳ ಭರಾಟೆಯಲ್ಲಿ ಗಿಜುಗುಡುತ್ತಿದ್ದ ಪಟ್ಟಣ ಗುರುವಾರ ಮುಂಜಾನೆ ಸ್ವಲ್ಪ ನಾಗರಿಕರ ಓಡಾಟ ಬಿಟ್ಟರೆ ಇಡೀ ದಿನ ಸ್ತಬ್ಧವಾಗಿತ್ತು. ಗುರುವಾರ ಮುಂಜಾನೆ 6ರಿಂದ ಮಧ್ಯಾಹ್ನ 12ರವರೆಗೆ ಜನರಿಗೆ ಹಾಲು, ತರಕಾರಿ, ಪತ್ರಿಕೆ ಮತ್ತು ದಿನಸಿಗಳನ್ನು ಕೊಳ್ಳಲು ಅವಕಾಶ ನೀಡಲಾಗಿತ್ತು.ಈ ವೇಳೆಯಲ್ಲಿ ಮನೆಯಿಂದ ಹೊರಬಂದ ಜನತೆ ತಮಗೆ ಬೇಕಾದ ವಸ್ತುಗಳನ್ನು ನಿರಾಳವಾಗಿ ಕೊಂಡರು.

ಬಳಿಕ ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಪೊಲೀಸರ ಸೂಚನೆ ಮೇರೆಗೆ ಮರಳಿ ಮನೆ ಸೇರಿದರು. ಖಾಸಗಿ ವಾಹನಗಳು ಬಹಳಷ್ಟು ಪ್ರಮಾಣದಲ್ಲಿ ಪಟ್ಟಣದಲ್ಲಿ ಕಂಡು ಬಂದವು. ಅಕ್ಕಪ್ಕದ ಹಳ್ಳಿಗಳ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬಂದಿದ್ದರು.

6 ಗಂಟೆಗಳ ಕಾಲ ಅಗತ್ಯ ವಸ್ತುಗಳನ್ನು ಕೊಳ್ಳಳು ಜನರಿಗೆ ಅವಕಾಶ ನೀಡಿದ್ದರಿಂದ ಎಲ್ಲಿಯೂ ಒತ್ತಡ ಕಂಡು ಬರಲಿಲ್ಲ. ಆನೆಚೌಕೂರು ಗೇಟ್‌ನಲ್ಲಿ ತುರ್ತು ವಾಹನಗಳನ್ನು ಬಿಟ್ಟರೆ ಇತರ ವಾಹನಗಳನ್ನು ಬಿಡಲಿಲ್ಲ. ಗೇಟ್‌ನಲ್ಲಿ ಪೊಲೀಸರ ಕಾವಲಿದ್ದು ತುರ್ತುವಾಹನಗಳನ್ನು ಪರೀಕ್ಷಿಸಿ ಬಿಡಲಾಗುತ್ತಿದೆ. ಔಷಧಿ ಅಂಗಡಿ ಪೆಟ್ರೋಲ್ ಬಂಕ್, ಬ್ಯಾಂಕ್ ಮೊದಲಾದವು ಕಾರ್ಯನಿರ್ವಹಿಸಿದವು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

ಸರಳ ಯುಗಾದಿ

ಈ ಬಾರಿ ಯುಗಾದಿ ಹಬ್ಬ ಸರಳವಾಗಿತ್ತು. ಎಲ್ಲಿಯೂ ಆಡಂಬರ ಕಂಡು ಬರಲಿಲ್ಲ. ತಳಿರು ತೋರಣಗಳ ಅಬ್ಬರವಿರಲಿಲ್ಲ. ಹಬ್ಬದ ವಾತಾವರಣ ಮಾಯವಾಗಿತ್ತು.ಹೊರಗಿನ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಹಬ್ಬ ಕಳೆಗಟ್ಟಿರಲಿಲ್ಲ. ಆತಂಕದ ನಡುವೆ ಎಂದಿನಂತೆ ಊಟೋಪಚಾರಗಳನ್ನು ಮಾತ್ರ ಮಾಡಿ ಹಬ್ಬ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT