ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು | ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಕ್ರಿಕೆಟ್

ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Published 7 ಮೇ 2024, 6:23 IST
Last Updated 7 ಮೇ 2024, 6:23 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸೋಮವಾರ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಅಮ್ಮಣಿಚಂಡ ಮತ್ತು ಮುದ್ದಂಡ ತಂಡಗಳ ನಡುವಿನ ಪಂದ್ಯ ಅಂತಹದ್ದೊಂದು ಅಪರೂಪದ ಕ್ಷಣಗಳನ್ನು ಸಾಕ್ಷೀಕರಿಸಿತು. ಮುದ್ದಂಡ ತಂಡ ನಿಗದಿತ 8 ಓವರ್‌ಗಳಲ್ಲಿ ನೀಡಿದ 98 ರನ್‌ಗಳ ಗುರಿಯನ್ನು ಬಹಳ ಉತ್ಸಾಹದಿಂದಲೇ ಬೆನ್ನತ್ತಿದ ಅಮ್ಮಣಿಚಂಡ ತಂಡವು 97 ರನ್‌ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಕೇವಲ 1 ರನ್‌ಗಳ ಅಂತರದಿಂದ ಜಯದ ನಗೆ ಬೀರಿದ ಮುದ್ದಂಡ ನೋಡುಗರ ಭರಪೂರ ಕರತಾಡನಕ್ಕೆ ಕಾರಣವಾಯಿತು.

ಭಾರಿ ಮೊತ್ತದ ರನ್‌ಗಳನ್ನು ಕಲೆ ಹಾಕಿದ ಆಲೆಮಾಡ ತಂಡಕ್ಕೆ ಮಂದನೆರವಂಡ ವಿರುದ್ಧ 113 ರನ್‌ಗಳಷ್ಟು ಹೆಚ್ಚು ಅಂತರದ ಗೆಲುವು ಲಭಿಸಿತು. ಕೇವಲ ಒಂದು ವಿಕೆಟ್ ಕಳೆದುಕೊಂಡ ಆಲೆಮಾಡ ತಂಡ ಗಳಿಸಿದ 164 ರನ್‌ಗಳಿಗೆ ಪ್ರೇಕ್ಷಕರು ತಲೆದೂಗಿದರು. ಗುರಿ ಬೆನ್ನತ್ತಿದ ಮಂದನೆರವಂಡ 51 ರನ್‌ಗಳನ್ನಷ್ಟೇ ಗಳಿಸಿತು.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ತಂಬುಕುತ್ತೀರ ತಂಡವೂ ನಂದೆಟೀರ 85 ರನ್‌ಗಳ ಭಾರಿ ಅಂತರದ ಗೆಲುವು ಪಡೆಯಿತು. ತಂಬುಕುತ್ತೀರ 3 ವಿಕೆಟ್‌ಗಳನ್ನು ಕಳೆದುಕೊಂಡು 123 ರನ್‌ಗಳನ್ನು ಗಳಿಸಿತು. ಗುರಿ ಬೆನ್ನತ್ತಿದ ನಂದೆಟೀರ ತಂಡವನ್ನು ಕೇವಲ 39 ರನ್‌ಗಳಿಗೆ ನಿಯಂತ್ರಿಸಿದ್ದು ಮಾತ್ರವಲ್ಲ ಎಲ್ಲ ವಿಕೆಟ್‌ಗಳನ್ನು ಪಡೆಯುವಲ್ಲಿ ತಂಬುಕುತ್ತೀರ ತಂಡದ ಬೌಲರ್‌ಗಳ ಯಶಸ್ವಿಯಾಗಿದ್ದು ವಿಶೇಷ ಎನಿಸಿತು.

ಕೊಳುಮಾಡಂಡ ತಂಡವು ತಡಿಯಂಗಡ ವಿರುದ್ಧ 50 ರನ್‌ಗಳ ಗೆಲುವು ಪಡೆಯಿತು. ಕೊಳುಮಾಡಂಡ ನೀಡಿದ 103 ರನ್‌ಗಳ ಗುರಿಯನ್ನು ಬೆನ್ನತ್ತಿದ ತಡಿಯಂಗಡ 52 ರನ್‌ಗಳಿಗೆ ಸೀಮಿತವಾಯಿತು.

ಮುಂಡಚಾಡೀರ ತಂಡವು ಪುಟ್ಟಿಚಂಡ ವಿರುದ್ಧ 34 ರನ್‌ಗಳ ಗೆಲುವು ಪಡೆಯಿತು. ಮುಂಡಚಾಡೀರ ನೀಡಿದ 95 ರನ್‌ಗಳ ನೀಡಿದ ಗುರಿಯನ್ನು ಬೆನ್ನತ್ತಿದ ಪುಟ್ಟಿಚಂಡ 60 ರನ್‌ಗಳನ್ನು ಮಾತ್ರವೇ ಗಳಿಸಿತು.

ಕರವಂಡ ತಂಡವು ತಾತಪಂಡ ವಿರುದ್ಧ 30 ರನ್‌ಗಳ ಗೆಲುವು ಪಡೆಯಿತು. ಕರವಂಡ ನೀಡಿದ 133 ರನ್‌ಗಳ ಗುರಿಯನ್ನು ಬೆನ್ನತ್ತಿದ ತಾತಪಂಡ ಶತಕ ದಾಟಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 102 ರನ್‌ಗಳಿಗಷ್ಟೇ ಸೀಮಿತವಾಯಿತು. ಆದರೆ, ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ತೋರಿದ ಅಮೋಘ ಪ್ರದರ್ಶನ ಪ್ರೇಕ್ಷಕರ ಮನ ತಣಿಸಿತು. ‌

ಜಮ್ಮಡ ತಂಡವು ಕೋಡಿರ ವಿರುದ್ಧ 18 ರನ್‌ಗಳ ಗೆಲುವು ಪಡೆಯಿತು. ಜಮ್ಮಡ ನೀಡಿದ 83 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೋಡಿರ 64 ರನ್‌ಗಳಿಗೆ ಮಾತ್ರವೇ ಸೀಮಿತವಾಯಿತು.

ಮೊಳ್ಳೆರ ತಂಡವು ಅಚ್ಚೆಯಂಡ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಅಚ್ಚೆಯಂಡ ನೀಡಿದ 75 ರನ್‌ಗಳ ಗುರಿಯನ್ನು ಮೊಳ್ಳೆರ ಕೇವಲ 4.2 ಓವರ್‌ಗಳಲ್ಲಿಯೇ 1 ವಿಕೆಟ್‌ ಕಳೆದುಕೊಂಡು ತಲುಪಿದ್ದು ವಿಶೇಷ ಎನಿಸಿತು.

ಅಲ್ಲಂಗಡ ತಂಡವು ಕಾರ್ತಮಾಡ ವಿರುದ್ಧ 9 ವಿಕೆಟ್‌ಗಳ ಅಮೋಘ ಜಯ ಪಡೆಯಿತು. ಕಾರ್ತಮಾಡ ತಂಡವು ನೀಡಿದ 60 ರನ್‌ಗಳ ಗುರಿಯನ್ನು ಅಲ್ಲಂಗಡ ತಂಡವು 6.3 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು ತಲುಪಿತು.

ಕೊಂಗಂಡ ತಂಡವು ಬೊಳ್ಳಚೆಟ್ಟೀರ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಪಡೆಯಿತು. ಬೊಳ್ಳಚೆಟ್ಟೀರ ತಂಡವು ನೀಡಿದ 55 ರನ್‌ಗಳ ಗುರಿಯನ್ನು ಕೊಂಗಂಡ ತಂಡವು ಕೇವಲ 2 ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡು ಪಡೆಯಿತು.

ಪಟ್ಟಡ ತಂಡವು ಪೊನ್ನಚಂಡ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಪಡೆಯಿತು. ಪೊನ್ನಚಂಡ ನೀಡಿದ 81 ರನ್‌ಗಳ ಗುರಿಯನ್ನು ಪಟ್ಟಡ ತಂಡವು 3 ವಿಕೆಟ್‌ ಕಳೆದುಕೊಂಡು ತಲುಪಿತು.

ಚೆನ್ನಪಂಡ ತಂಡವು ಬೊಳಕಾರಂಡ ವಿರುದ್ಧ 7 ವಿಕೆಟ್‌ಗಳ ಜಯ ಪಡೆಯಿತು. ಬೊಳಕಾರಂಡ ನೀಡಿದ 77 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆನ್ನಪಂಡ 3 ವಿಕೆಟ್‌ಗಳನ್ನು ಕಳೆದುಕೊಂಡು 6.4 ಓವರ್‌ಗಳಲ್ಲಿಯೇ ಗೆಲುವಿನ ದಡ ತಲುಪಿತು.

ಪೋರಂಗಡ ತಂಡವು ಚಟ್ಟಂಡ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಪಡೆಯಿತು. ಚಟ್ಟಂಡ ನೀಡಿದ 76 ರನ್‌ಗಳ ಗುರಿಯನ್ನು 6 ವಿಕೆಟ್‌ಗಳನ್ನು ಕಳೆದುಕೊಂಡ ಪೋರಂಗಡ ತಲುಪಿ ಜಯದ ನಗೆ ಬೀರಿತು.

ಉಳಿದಂತೆ, ಪಟ್ರಪಂಡ ವಾಕ್‌ ಓವರ್ ಪಡೆಯಿತು.

ತಂಬುಕುತ್ತೀರ ತಂಡದಿಂದ ಉತ್ತಮ ಪ್ರದರ್ಶನ ಕ್ರಿಕೆಟ್ ಪ್ರಿಯರಿಗೆ ರಸದೌತಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT