ಗುರುವಾರ , ಏಪ್ರಿಲ್ 15, 2021
21 °C
ಅಂಕನಹಳ್ಳಿ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಗೆ ರೈತರ ಬೆಳೆ ಹಾನಿ

11 ಗ್ರಾಮಗಳಿಗೆ ಡಿ.ಸಿ ಭೇಟಿ: ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಅಂಕನಹಳ್ಳಿ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಗೆ ರೈತರ ಬೆಳೆ ಹಾನಿಯಾದ 11 ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಫೆ.18ರಂದು ಅಂಕನಹಳ್ಳಿ, ಮೆಣಸ, ಕೈಸರವಳ್ಳಿ, ಸೀಗೆಮರೂರು, ಹಂಬಳ್ಳಿ, ಮನೆಹಳ್ಳಿ, ಬೆಟ್ಟದಹಳ್ಳಿ, ಮೈಲಾಥಪುರ, ನಾಗವಾರ ಮೊದಲಾದ 11 ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿತ್ತು.ಸುಮಾರು 2,400 ಎಕರೆ ಪ್ರದೇಶದಲ್ಲಿ ಕಾಫಿ, ಕಾಳುಮೆಣಸು, ಬಾಳೆ, ಅಡಿಕೆ ಸೇರಿದಂತೆ ಹೊಲಗಳಲ್ಲಿ ಬೆಳೆದಿದ್ದ ಜೋಳ, ಹಸಿರುಮೆಣಸಿನಕಾಯಿ, ಸಿಹಿಗೆಣಸು, ಮರಗೆಣಸು ಇತ್ಯಾದಿ ಬೆಳೆಗಳು ನೆಲಕಚ್ಚಿತ್ತು.

ಉಪವಿಭಾಗಾಧಿಕಾರಿ, ಸೋಮವಾರಪೇಟೆ ತಾಲ್ಲೂಕು ತಹಶಿಲ್ದಾರ್, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಕಾಫಿಮಂಡಳಿ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಥಮಿಕ ಸಮೀಕ್ಷೆ ನಡೆಸಿದರು. ಶೇ.100ರಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಬೆಳೆ ಹಾನಿಗೊಳಗಾದ ರೈತರಿಂದ ಜಿಲ್ಲಾಧಿಕಾರಿಯವರು ಮಾಹಿತಿ ಪಡೆದುಕೊಂಡರು. ವಿವಿಧ ಇಲಾಖಾ ಅಧಿಕಾರಿಗಳಿಂದ ವಿವರಣೆ ಪಡೆದರು. ಆಲಿಕಲ್ಲು ಮಳೆಯಿಂದ ಪ್ರತಿಯೊಂದು ಕೃಷಿ ಬೆಳೆಯೂ ಹಾನಿಯಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿ ಶೋಭಾ, ತಹಶಿಲ್ದಾರ್ ಗೋವಿಂದರಾಜ್ ವಿವರಣೆ ನೀಡಿದರು.

ಜಿಲ್ಲಾಧಿಕಾರಿ ಚಾರುಲತಾ ಮಾತನಾಡಿ, ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದರು.

ತಹಶಿಲ್ದಾರ್ ಗೋವಿಂದರಾಜ್, ತೋಟಗಾರಿಕಾ ಇಲಾಖೆ ಅಧಿಕಾರಿ ಶೋಭಾ, ಕಂದಾಯ ಇಲಾಖೆ ಉಪತಹಶೀಲ್ದಾರ್‌ ಮಧುಸೂದನ, ಕಂದಾಯ ಪರಿವೀಕ್ಷಕ ಕೆ.ಎಮ.ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ವಿಶ್ವವಾಣಿ, ತೋಟಗಾರಿಕೆ ಹೋಬಳಿ ಅಧಿಕಾರಿ ಸಿಂಧೂ, ಕೃಷಿ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ವೇದಪ್ರಿಯ, ಕಾಫಿಮಂಡಳಿ ಸಂಪರ್ಕಾಧಿಕಾರಿ ವಿಶ್ವನಾಥ್, ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣಿಮಾ, ಕಾರ್ಯದರ್ಶಿ ಚಂದ್ರೇಗೌಡ, ಕಂದಾಯ ಇಲಾಖೆ ಸಿಬ್ಬಂದಿ ರುದ್ರಯ್ಯ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು