ಇಲ್ಲಿನ ಫೀಲ್ಡ್‌ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ‘ಅನಲಿಟಿಕಲ್ ಕೆಮಿಸ್ಟ್ರಿ ಅಂಡ್ ಎನರ್ಜಿ’ ವಿಷಯದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ 2024ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 8,257ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 65119ನೇ ಸ್ಥಾನವನ್ನು ಪಡೆದಿದ್ದಾರೆ.