ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರಲ್ಲಿ ಬಿಯರ್‌ ಮಾರಾಟವೇ ಅಧಿಕ!

ಕೊಡಗು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಮದ್ಯದ ವಹಿವಾಟು
Published 3 ಜನವರಿ 2024, 16:15 IST
Last Updated 3 ಜನವರಿ 2024, 16:15 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

‌ಮಡಿಕೇರಿ: ಜಿಲ್ಲೆಯಲ್ಲಿ 2022ಕ್ಕೆ ಹೋಲಿಸಿದರೆ 2023ರಲ್ಲಿ ಮದ್ಯ ಮಾರಾಟ ತುಸು ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಮದ್ಯಕ್ಕಿಂತ ಬಿಯರ್‌ ಕಡೆಗೆ ಪಾನಪ್ರಿಯರು ಹೆಚ್ಚು ಗಮನ ಹರಿಸಿದ್ದಾರೆ.

2012 ಏಪ್ರಿಲ್ 1ರಿಂದ ಡಿಸೆಂಬರ್‌ 31ರವರೆಗೆ ಒಟ್ಟು 19,456 ಮದ್ಯದ ಬಾಕ್ಸ್‌ಗಳು ಹೆಚ್ಚು ಮಾರಾಟವಾಗಿದ್ದರೆ, 53,036 ಬಿಯರ್‌ ಬಾಕ್ಸ್‌ಗಳು ಹೆಚ್ಚು ಮಾರಾಟವಾಗಿವೆ.

ಜಿಲ್ಲೆಯಲ್ಲಿರುವ 230ಕ್ಕೂ ಅಧಿಕ ಮದ್ಯದಂಗಡಿಗಳಲ್ಲಿ ಬಿರುಸಿನ ವಹಿವಾಟು 2023ರ ವರ್ಷಾಂತ್ಯದಲ್ಲಿ ನಡೆದಿದೆ. 2022ರಲ್ಲಿ ನಡೆದಿದ್ದ ವ್ಯಾಪಾರಕ್ಕಿಂತಲೂ ಅಧಿಕ ಮದ್ಯ ವ್ಯಾಪಾರವಾಗಿದೆ. ಆದರೆ, ಸರ್ಕಾರ ನೀಡಿದ್ದ ಗುರಿ ತಲುಪುವಲ್ಲಿ ಯಶಸ್ವಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

2022ರ ಡಿಸೆಂಬರ್‌ ತಿಂಗಳಿನಲ್ಲಿ 94,320 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದ್ದವು. 49,038 ಬಾಕ್ಸ್ ಬಿಯರ್‌ ಮಾರಾಟವಾಗಿತ್ತು. ಆದರೆ, 2023ರ ಡಿಸೆಂಬರ್‌ ತಿಂಗಳಿನಲ್ಲಿ 92,207 ಮದ್ಯದ ಬಾಕ್ಸ್‌ಗಳು ಹಾಗೂ 52,450 ಬಿಯರ್ ಬಾಕ್ಸ್‌ಗಳು ಮಾರಾಟವಾಗಿವೆ.

ಮಡಿಕೇರಿ ತಾಲ್ಲೂಕಿನಲ್ಲಿ 916, ಸೋಮವಾರಪೇಟೆ ತಾಲ್ಲೂಕಿನಲ್ಲಿ 856 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 341 ಒಟ್ಟಾರೆ ಜಿಲ್ಲೆಯಲ್ಲಿ 2,113 ಮದ್ಯದ ಬಾಕ್ಸ್‌ಗಳು ಕಡಿಮೆ ಮಾರಾಟವಾಗಿವೆ.

ಬಿಯರ್‌ ವಿಚಾರದಲ್ಲೂ ಮಡಿಕೇರಿ ತಾಲ್ಲೂಕಿನಲ್ಲಿ 2022ರ ಡಿಸೆಂಬರ್‌ಗೆ ಹೋಲಿಸಿದರೆ 452 ಬಾಕ್ಸ್‌ಗಳಷ್ಟು ಕಡಿಮೆ ಮಾರಾಟವಾಗಿವೆ. ಆದರೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ 2,007 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 1,857 ಬಿಯರ್‌ ಬಾಕ್ಸ್‌ಗಳು ಹೆಚ್ಚು ಮಾರಾಟವಾಗಿವೆ. ಒಟ್ಟಾರೆ, ಜಿಲ್ಲೆಯಲ್ಲಿ 3,412 ಬಿಯರ್‌ ಬಾಕ್ಸ್‌ಗಳು ಹೆಚ್ಚು ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT