ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಸತಿ ಪ್ರದೇಶದಲ್ಲಿ ಓಡಾಡಿದ ಸಲಗ

Published 13 ಜೂನ್ 2024, 3:15 IST
Last Updated 13 ಜೂನ್ 2024, 3:15 IST
ಅಕ್ಷರ ಗಾತ್ರ

ಸಿದ್ದಾಪುರ: ನೆಲ್ಯಹುದಿಕೇರಿಯ ಶಾಲೆ ರಸ್ತೆ ಭಾಗದ ವಸತಿ ಪ್ರದೇಶದಲ್ಲಿ ಒಂಟಿ ಸಲಗದ ಹಾವಳಿ ಮುಂದುವರಿದಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಈ ಭಾಗದ ವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಸಲಗವು ರಾತ್ರಿ ಸಮಯದಲ್ಲಿ ಮನೆಗಳ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದೆ. ಮನೆಗಳ ಬಳಿ ಬಂದು ತೆಂಗು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು, ತಿಂದು ನಾಶಗೊಳಿಸುತ್ತಿದೆ.

ಸುಬ್ರಮಣಿ ಹಾಗೂ ಉದಯ್ ಕುಮಾರ್ ಎಂಬವರ ಮನೆಯ ಬಳಿ ಬಂದ ಸಲಗವು ದಾಂದಲೆ ನಡೆಸಿದೆ. ಸಲಗದ ಉಪಟಳದಿಂದ ಸ್ಥಳೀಯ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ. ಕೂಡಲೇ ಸಲಗವನ್ನು ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT