ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ರೈಲ್ವೆ ಕಂಬಿಗೆ ಸಿಲುಕಿ ಪರದಾಡಿದ ಕಾಡಾನೆ

Last Updated 14 ಮೇ 2022, 7:58 IST
ಅಕ್ಷರ ಗಾತ್ರ

ಸಿದ್ದಾಪುರ (ಕೊಡಗು): ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ಕಂಬಿಗೆ ಕಾಡಾನೆ ಸಿಲುಕಿ ಕೊನೆಗೆ ಅದರಿಂದ ಹೊರಬಂದು, ಅರಣ್ಯಕ್ಕೆ ತೆರಳಿದ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಬಳಿ ಶನಿವಾರ ನಡೆದಿದೆ.

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ನದಿ ದಡದಲ್ಲಿ ಕಾಡಾನೆ ತಡೆಗೆ ಅರಣ್ಯ ಇಲಾಖೆ ರೈಲ್ವೆ ಕಂಬಿ ಅಳವಡಿಸಿತ್ತು. ಗ್ರಾಮದ ಸುರೇಶ್ ಎಂಬುವರ ಕಾಫಿ ತೋಟದಲ್ಲಿದ್ದ ಅಂದಾಜು 25 ವರ್ಷ ಪ್ರಾಯದ ಸಲಗವೊಂದು ತೋಟದಿಂದ ಅರಣ್ಯಕ್ಕೆ ದಾಟುವಾಗ ರೈಲ್ವೆ ಕಂಬಿಗೆ ಸಿಲುಕಿಕೊಂಡಿದೆ.

ಕೆಲವು ಗಂಟೆಗಳ ಪ್ರಯತ್ನದ ಬಳಿಕ ಕಾಡಾನೆಯು ಸುರಕ್ಷಿತವಾಗಿ ಕಂಬಿಯಿಂದ ಹೊರಬಂದು ದುಬಾರೆ ಮೀಸಲು ಅರಣ್ಯಕ್ಕೆ ತೆರಳಿದೆ. ಸ್ಥಳೀಯರು ಕಾಡಾನೆಯ ಚಿತ್ರವನ್ನು ಸೆರೆಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT