ಸುಂಟಿಕೊಪ್ಪ (ಕೊಡಗು ಜಿಲ್ಲೆ): ಇಲ್ಲಿನ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಬಳಿಯ ಎಸ್ಟೇಟ್ವೊಂದರಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾದ ಗಂಡಾನೆಯೊಂದು ಬುಧವಾರ ಮೃತಪಟ್ಟಿದೆ. ಒಂದು ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ 4ಕ್ಕೆ ಏರಿದೆ.

‘ಕಬ್ಬಿಣದ ವಿದ್ಯುತ್ ಕಂಬವೊಂದಕ್ಕೆ ಆನೆ ತುರಿಸಿಕೊಳ್ಳಲು ಯತ್ನಿಸಿದಾಗ ಕಂಬ ಬಾಗಿ, ಅದರ ತಂತಿಗಳು ಕಂಬಕ್ಕೆ ತಗುಲಿದೆ. ಈ ವೇಳೆ ಕಬ್ಬಿಣದ ಕಂಬದಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಸುಮಾರು 13–14 ವರ್ಷ ಗಂಡಾನೆ ಸ್ಥಳದಲ್ಲೇ ಮೃತಪಟ್ಟಿದೆ. ಈ ಬಗೆಯ ಕಬ್ಬಿಣದ ವಿದ್ಯುತ್ ಕಂಬ ತೀರಾ ಹಳೆಯದು. ಇಂತಹ ವಿದ್ಯುತ್ ಕಂಬಗಳನ್ನು ಬದಲಾಸುವಂತೆ ಸೆಸ್ಕ್ಗೆ ಪತ್ರ ಬರೆಯಲಾಗುವುದು’ ಎಂದು ಡಿಸಿಎಫ್ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳಕ್ಕೆ ಡಿಸಿಎಫ್ ಭಾಸ್ಕರ್, ವಲಯ ಅರಣ್ಯಾಧಿಕಾರಿ ರತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದೊಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಒಟ್ಟು 4 ಕಾಡಾನೆಗಳು ಮೃತಪಟ್ಟಿವೆ. ಅವುಗಳಲ್ಲಿ 2 ಸಹಜ ಕಾರಣಗಳಿಂದ ಮೃತಪಟ್ಟಿದ್ದರೆ, ಇನ್ನೆರಡು ವಿದ್ಯುತ್ ಆಘಾತದಿಂದ ಮೃತಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.