ಬುಧವಾರ, ಮೇ 18, 2022
24 °C

ಕಾರ್ಮಿಕರನ್ನು ಓಡಿಸಿದ ಕಾಡಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕೊಡಗು): ಮರದ ನಾಟಾಗಳನ್ನು ತುಂಬುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿದ್ದಾಪುರ ಸಮೀಪದ ಹಂಚಿಕಾಡು ಗ್ರಾಮದ ರಸ್ತೆ ಬದಿಯಲ್ಲಿ ಮರದ ನಾಟಾವನ್ನು ಕಾರ್ಮಿಕರು ಲಾರಿಗೆ ತುಂಬುತ್ತಿದ್ದಾಗ ಸಮೀಪದ ತೋಟದಿಂದ ಕಾಡಾನೆ ದಾಳಿಗೆ ಮುಂದಾಗಿದೆ. ಕಾರ್ಮಿಕರು ಲಾರಿಯ ಮೇಲೆ ಏರಿ ಕುಳಿತಿದ್ದು ಚಾಲಕ ಕೂಡಲೇ ಲಾರಿ ಚಲಾಯಿಸಿದ್ದಾನೆ. ಕಾಡಾನೆಯು ಲಾರಿಯನ್ನು ಅಲ್ಪದೂರ ಬೆನ್ನಟ್ಟಿ, ವಾಪಸಾಗಿದೆ.

ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಸ್ಥಳೀಯರು, ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು