ಕುಶಾಲನಗರ: ಹರಿಯಾಣದ ಅಮೇಥಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಚ್.ಎ. ಚಿಂತನಾ ಅವರ ‘ಕೊಡಗು ಜಿಲ್ಲೆಯ ಅರಣ್ಯದ ಮೇಲೆ ನಗರೀಕರಣದ ಪರಿಣಾಮ’ ಎಂಬ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ₹1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ.

ಪಟ್ಟಣದ ಯೋಗಾನಂದ ಬಡಾವಣೆಯ ನಿವಾಸಿ ಉದ್ಯಮಿ ಹೆಚ್.ಎಸ್.ಅಶೋಕ್ ಹಾಗೂ ಸುಮಾ ದಂಪತಿಗಳ ಪುತ್ರಿ ಚಿಂತನಾ, ಮಡಿಕೇರಿ ಗಾಳಿಬೀಡು ನವೋದಯ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಮಂಗಳೂರಿನ ನಿಟ್ಟೆ ಕಾಲೇಜಿನಲ್ಲಿ ಬಿಇ ಅರ್ಕಿಟೆಕ್ಚರ್ ಪದವಿ ಪೂರೈಸಿದ್ದರು. ಹರಿಯಾಣದ ಅಮೇಥಿಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪ್ಲಾನಿಂಗ್ ಅರ್ಬನ್ ಹಾಗೂ ರೀಜನಲ್ ಎಂಬ ಕೋರ್ಸ್ ಅಧ್ಯಯನ ಮಾಡಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ. ದೆಹಲಿಯ ಮನೇಕ್ಷಾ ಸೆಂಟರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಂತನಾ ಅವರ
ಸಾಧನೆಗೆ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.