ಸೋಮವಾರಪೇಟೆ: ‘ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಸೇವೆ ನಿವೃತ್ತರಿಗೂ ವಿಸ್ತರಿಸಿದಲ್ಲಿ, ಎಲ್ಲರಿಗೂ ಅನುಕೂಲವಾಗುವುದು’ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದಲ್ಲಿ 150 ಜನ ಸದಸ್ಯರಿದ್ದಾರೆ. ಪ್ರಸಕ್ತ ಸಾಲಿನಲ್ಲಿ 20 ಮಂದಿ ಹೊಸ ಸದಸ್ಯತ್ವ ಪಡೆದಿದ್ದಾರೆ. ಆದರೆ, ಸದಸ್ಯರು ಕಾರ್ಯೋನ್ಮುಖರಾಗಿಲ್ಲ. ಸಂಘ, ಸಂಸ್ಥೆಗಳ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದರು.

ಸಂಘದ ಸದಸ್ಯರಾದ ಕೆ.ಟಿ.ಚೆಲುವೆ ಗೌಡ, ಎ.ಬಿ.ಶಿವದೇವಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ರಚಿತ ನಾಡಹನಿ ಕಥಸಂಕಲನವನ್ನು ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಬಿಡುಗಡೆ ಮಾಡಿದರು.

ಕಾರ್ಯದರ್ಶಿ ಬಿ.ಎಂ.ಆನಂದ, ಖಜಾಂಜಿ ಎಸ್.ಆರ್.ಕೆಂಚೇಗೌಡ, ಸಹ ಕಾರ್ಯದರ್ಶಿ ಎಸ್.ಬಿ.ರಾಜಪ್ಪ, ನಿರ್ದೇಶಕರಾದ ಎಚ್.ಎನ್.ತಂಗಮ್ಮ, ಟಿ.ಕೆ.ಮಾಚಯ್ಯ, ಎಚ್.ಜಿ.ಕುಟ್ಟಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.