ಟೀಮ್ ಲಿವರೇಜ್ ತಂಡದ ಆಟಗಾರರೊಬ್ಬರ ಬ್ಯಾಟಿಂಗ್ ವೈಖರಿ ಹೀಗಿತ್ತು
ಆಟಗಾರರಿಗಾಗಿ ಮೀಸಲು ನಿಧಿ ಆರ್ಥಿಕ ಪಾಠ
ಟೀಮ್ ಲೆವರೇಜ್ ತಂಡದ ಫ್ರಾಂಚೈಸಿಯವರು ತಮ್ಮ ತಂಡದ ಆಟಗಾರರಿಗಾಗಿ ₹ 10 ಲಕ್ಷ ಮೊತ್ತದ ಮೀಸಲು ನಿಧಿ ಇರಿಸಿದ್ದು ಈ ಮೂಲಕ ಅವರ ಆರ್ಥಿಕ ಶ್ರೇಯೋಭಿವೃದ್ಧಿಗೆ ಗಮನ ಹರಿಸಿದ್ದಾರೆ. ಈ ಕುರಿತು ‘ಪ‍್ರಜಾವಾಣಿ’ಯೊಂದಿಗೆ ಮಾತನಾಡಿದ ಟೀಮ್ ಲೆವರೇಜ್ ತಂಡದ ವ್ಯವಸ್ಥಾಪಕ ನಿರ್ದೇಶಕ ಪಾಲೇಕಂಡ ವಿಖ್ಯಾತ್ ಚಿಣ್ಣಪ್ಪ ‘ನಾವೀಗ ನಮ್ಮ ತಂಡದ 15 ಆಟಗಾರರಿಗಾಗಿ ₹ 10 ಲಕ್ಷ ನಿಧಿ ಇರಿಸಿದ್ದೇವೆ. ಆಟಗಾರರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣವನ್ನು ಹೂಡಿಕೆ ಮಾಡಿದರೆ ಫ್ರಾಂಚೈಸಿಯವರೂ ಅಷ್ಟೇ ಮೊತ್ತದ ಹಣವನ್ನು ನೀಡುತ್ತಾರೆ. ಈ ಹಣವನ್ನೆಲ್ಲ ನಿಶ್ಚಿತ ಬಡ್ಡಿ ನೀಡುವಂತಹ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಲಾಭವನ್ನು ಆಟಗಾರರಿಗೆ ನೀಡಲಾಗುವುದು’ ಎಂದರು. ಹಣಕಾಸಿನ ಉಳಿತಾಯ ಹೂಡಿಕೆ ಕುರಿತು ಆಟಗಾರರಲ್ಲಿ ಜಾಗೃತಿ ಮೂಡಿಸುವುದು ಮುಂದೆ ಅವರ ಆರ್ಥಿಕ ಭವಿಷ್ಯ ಉಜ್ವಲವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.