ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ಉಸ್ತಾದ್‌‌‌ಗಳಿಗೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

Published 4 ಜುಲೈ 2024, 13:14 IST
Last Updated 4 ಜುಲೈ 2024, 13:14 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಸುನ್ನಿ ಜಮಾಯತುಲ್ ಮುಹಲ್ಲಿಮೀನ್ ಕೇಂದ್ರ ಸಮಿತಿಯಿಂದ ಇಲ್ಲಿಗೆ ಸಮೀಪದ ಎಮ್ಮೆಮಾಡುವಿನಲ್ಲಿ ಫಲಾನುಭವಿ ಮನೆಗೆ ಶಿಲಾನ್ಯಾಸ ನಡೆಸಲಾಯಿತು.

ಸಮಸ್ತ ಶತಮಾನೋತ್ಸವದ ಪ್ರಯುಕ್ತ 100 ಉಸ್ತಾದ್‌‌‌ಗಳಿಗೆ ಮನೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು ಕೊಡಗು ಜಿಲ್ಲೆಯಲ್ಲಿ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.

ಇಲ್ಲಿನ ನೌಶಾದ್ ಲತೀಫಿ ಅವರಿಗೆ ಸೇರಿದ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ನೇತೃತ್ವದಲ್ಲಿ ಜರುಗಿತು. 

ಕೋಶಾಧಿಕಾರಿ ಅಬ್ದುಲ್ಲ ಸಖಾಫಿ, ಕೊಳಕೇರಿ, ಪರೀಕ್ಷಾ ವಿಭಾಗ ಕಾರ್ಯದರ್ಶಿ ಸಂಶುದ್ದೀನ್ ಅಂಜದಿ ಬಲಮುರಿ, ಜಿಲ್ಲಾ ನೇತಾರ ನಝೀರ್ ಸಖಾಫಿ ಕುಂಜಿಲ, ಹಂಝ ರಹ್ಮಾನಿ ಕಂಡಕ್ಕರೆ ಸ್ಥಳೀಯ ಮದರಸದ ಹಂಝ ಸಖಾಫಿ, ಖತೀಬ ಮುಹಮ್ಮದ್ ರಾಝಿಖ್ ಫೈಝಿ ಪಟ್ಟಾಂಬಿ ಹಾಗೂ ಸ್ಥಳೀಯ ಮುಸ್ಲಿಂ ಜಮಾಯತ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT