ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಹೋಂಸ್ಟೇಯಲ್ಲಿ ಗ್ಯಾಸ್ ಸೋರಿಕೆ– ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು

Last Updated 25 ಅಕ್ಟೋಬರ್ 2021, 10:59 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಡೇರಿ ಫಾರಂ ಬಳಿಯ ಕೂರ್ಗ್ ವ್ಯಾಲಿ ವ್ಯೂ ಹೋಂಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದ ಯುವತಿಯೊಬ್ಬಳು, ಸ್ನಾನಕ್ಕೆ ತೆರಳಿದ್ದಾಗ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಮೃತಪಟ್ಟಿದ್ದಾರೆ.

ಬಳ್ಳಾರಿ ತೋರಣಗಲ್ಲು ನಿವಾಸಿ ವಿಘ್ನೇಶ್ವರಿ (24) ಮೃತಪಟ್ಟವರು. ಇವರು, ಮುಂಬೈನಲ್ಲಿ ಉದ್ಯೋಗದಲ್ಲಿದ್ದರು. ತಮ್ಮ ನಾಲ್ವರು ಸ್ನೇಹಿತೆಯರೊಂದಿಗೆ ಎರಡು ದಿನಗಳ ಹಿಂದೆ ಮಡಿಕೇರಿಗೆ ಬಂದಿದ್ದರು. ಭಾನುವಾರ ರಾತ್ರಿ ಸ್ನಾನಕ್ಕೆ ತೆರಳಿದ್ದ ಅವರು, ಕೊಠಡಿಯಿಂದ ಹೊರಬಾರದಿದ್ದಾಗ ಅನುಮಾನಗೊಂಡ ಸ್ನೇಹಿತೆಯರು ಬಾಗಿಲು ತೆರೆದು ನೋಡಿದಾಗ ವಿಘ್ನೇಶ್ವರಿ ಕುಸಿದು ಬಿದಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಂಸ್ಟೇ ಮುಚ್ಚಿಸಲು ಆಗ್ರಹ: ಪ್ರವಾಸಕ್ಕೆ ಬಂದಿದ್ದ ಯುವತಿಯರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗದ ಹೋಂಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಅದು ಅನಧಿಕೃತ ಹೋಂಸ್ಟೇ. ಮಾಲೀಕ ವಿದೇಶದಲ್ಲಿ ನೆಲೆಸಿದ್ದು, ಸ್ಥಳೀಯರೊಬ್ಬರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇಂತಹ ಹೋಂಸ್ಟೇ ಮುಚ್ಚಿಸಲು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಅನಂತ ಶಯನ ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT