ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಹಿಂತಿರುಗಿಸಿ ಮಾನವೀಯತೆ‌ ಮೆರೆದರು

Published 14 ಜೂನ್ 2024, 6:36 IST
Last Updated 14 ಜೂನ್ 2024, 6:36 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ವಿಎಸ್‌ಎಸ್‌ಎನ್ ಮುಂಭಾಗದ ರಸ್ತೆಯಲ್ಲಿ ಗುರುವಾರ ಸಿಕ್ಕಿದ ₹ 16 ಸಾವಿರವನ್ನು ವಾರಸುದಾರರಿಗೆ ಹಸ್ತಾಂತರಿಸಿ ಆಶಾ ಕಾರ್ಯಕರ್ತೆ ಮತ್ತು ಕಾಫಿ ಬೆಳೆಗಾರರೊಬ್ಬರು ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಮೆರೆದಿದ್ದಾರೆ.

ಗುರುವಾರ ಬೆಳಿಗ್ಗೆ ₹ 500 ಮುಖಬೆಲೆಯ ಒಟ್ಟು ₹ 16,000  ಕಂಬಿಬಾಣೆಯ ಆಶಾ ಕಾರ್ಯಕರ್ತೆ ವೀಣಾ ಮತ್ತು ಕಾಫಿ ಬೆಳೆಗಾರ ಸತೀಶ್ ಅವರಿಗೆ ಸಿಕ್ಕಿದೆ. ಕೂಡಲೇ ಅವರು ಅದನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ನೀಡಿ ವಾರಸುದಾರರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಆ ವೇಳೆಗಾಗಲಿ ಸಾಮಾಜಿಕ ಜಾಲ ತಾಣದಲ್ಲಿ ನಗದು ಕಂತು ಬಿದ್ದು ಸಿಕ್ಕಿರುವ ಬಗ್ಗೆ ಪ್ರಚಾರವಾಗಿತ್ತು.

ಸುಂಟಿಕೊಪ್ಪದ ಗಿರಿಯಪ್ಪ ಮನೆ ನಿವಾಸಿ ಯಂಕನ ಕೌಶಿಕ್ ಹಣ ಕಳೆದುಕೊಂಡಿದ್ದರು. ತಮ್ಮ ಹಣದ ಲೆಕ್ಕಾಚಾರ ಮತ್ತು ಸೂಕ್ತ ದಾಖಲಾತಿಯನ್ನು ಪಿಎಸ್‌ಐ ಎಂ.ಸಿ.ಶ್ರೀಧರ್ ಅವರ ಮುಂದೆ ಹಾಜರುಪಡಿಸಿ ಹಣವನ್ನು ಮರಳಿ ಪಡೆದು ಹಣ ನೀಡಿ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT