ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ತೀತಮಾಡಕ್ಕೆ ಭರ್ಜರಿ ಜಯ

ಆತಿಥೇಯ ಕುಂಡ್ಯೋಲಂಡ ತಂಡಕ್ಕೆ ನಿರಾಸೆ
Published 16 ಏಪ್ರಿಲ್ 2024, 4:32 IST
Last Updated 16 ಏಪ್ರಿಲ್ 2024, 4:32 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ಸಾಂಘಿಕ ಹೋರಾಟ ಬಲದಿಂದ ತೀತಮಾಡ ತಂಡವು ಕುಂಡ್ಯೋಳಂಡ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಕುಂಡ್ಯೋಲಂಡ ತಂಡವನ್ನು 5–2 ಗೋಲುಗಳಿಂದ ಮಣಿಸಿತು. 

ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ತೀತಮಾಡ ತಂಡದ ಪೃಥ್ವಿ, ದೇವಯ್ಯ, ಮದನ್‌, ಸುಜಿತ್‌ ಹಾಗೂ ಪೊನ್ನಣ್ಣ ತಲಾ ಒಂದು ಗೋಲನ್ನು ತಂಡಕ್ಕೆ ಸೇರಿಸಿ ಗೆಲುವು ಸುಲಭಗೊಳಿಸಿದರು.

ಆತಿಥೇಯ ತಂಡದ ಪೊನ್ನಪ್ಪ ಹಾಗೂ ವಿಕಾಸ್‌ ತಲಾ ಒಂದು ಗೋಲು ಗಳಿಸಲಷ್ಟೇ ಸಾಧ್ಯವಾಯಿತು.

ಚೆಕ್ಕೆರ ತಂಡದವರು 6–0 ಗೋಲುಗಳಿಂದ ಪೊಂಜಂಡ ತಂಡವನ್ನು ಮಣಿಸಿದರೆ, ಚಂದುರ ತಂಡದವರು 6-5 ಗೋಲಿನಿಂದ ಕಾಳಿಮಾಡ ವಿರುದ್ಧ ರೋಚಕ ಗೆಲುವು ದಾಖಲಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಕೋಡಿಮಣಿಯಂಡ ತಂಡದವರು 5-4ರಿಂದ  ಕಾಂಡೇರ ವಿರುದ್ಧ ಜಯ ಸಾಧಿಸಿದರು.

ಮಂಡೇಟಿರ 2-0ರಿಂದ ಮೇವಡ ತಂಡವನ್ನು; ಕಂಬಿರಂಡ ತಂಡವು ಮಲ್ಲಜ್ಜಿರ ವಿರುದ್ಧ 3–0ರಿಂದ; ಪುದಿಯೋಕ್ಕಡ ತಂಡವು ಬೊಟ್ಟಂಗಡ ವಿರುದ್ಧ 3-0ರಿಂದ; ಕೊಂಗೆಟಿರ ತಂಡವು ಅಲ್ಲಾರಂಡ ವಿರುದ್ಧ 4-0ರಿಂದ; ಅಮ್ಮಣಿಚಂಡ ತಂಡವು ಚೋಕಿರ ತಂಡವನ್ನು 3-1ರಿಂದ; ಚೇಂದಂಡ ತಂಡವು ಕಂಗಂಡ ವಿರುದ್ಧ 3-0ರಿಂದ; ಕೇಲೆಟಿರ ತಂಡವು ಪಾಲಂದಿರ ತಂಡವನ್ನು 3-0ರಿಂದ; ಮುಕ್ಕಾಟಿರ (ಬೋಂದ) ತಂಡವು ಅಳಮೇಂಗಡ ತಂಡವನ್ನು 5-4 ಗೋಲುಗಳಿಂದ ಸೋಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT