ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಎರಡೂ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ
Last Updated 10 ನವೆಂಬರ್ 2022, 11:40 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸುವುದು ನಿಶ್ಚಿತ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಅವರು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎರಡೂ ವಿಧಾನಸಭಾ ಕ್ಷೇತ್ರದಲ್ಲೂ ಸರ್ವಸಮ್ಮತ ಅಭ್ಯರ್ಥಿಯನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡುವುದಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಸೇರಿದಂತೆ ಎಲ್ಲ ಮುಖಂಡರು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ’ ಎಂದರು.

ಕಾಂಗ್ರೆಸ್‌ನ ಮತಬ್ಯಾಂಕ್ ಅದರ ಕೈ ತಪ್ಪಿದೆ. ಜನರಲ್ಲಿ ನರೇಂದ್ರ ಮೋದಿ ಕುರಿತು ಭ್ರಮ ನಿರಸನವಾಗಿದೆ. ಇದು ಜೆಡಿಎಸ್‌ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

‘ಮಸೀದಿ, ದೇಗುಲ ಕಟ್ಟುವುದು ನಮ್ಮ ಕೆಲಸ ಅಲ್ಲ. ಬಡವರ ಮನೆ ಕಟ್ಟುವುದು ನಮ್ಮ ಕೆಲಸ. ಎಲ್ಲರಿಗೂ ಎಲ್ಲ ಕಾಯಿಲೆಗೂ ಉಚಿತ ಚಿಕಿತ್ಸೆ, ಎಲ್ಲರಿಗೂ ಉಚಿತ ಶಿಕ್ಷಣ, ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವುದು ನಮ್ಮ ಗುರಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನಮಗೆ ಮೋದಿ ಹೇಳಿದ ಅಚ್ಚೇದಿನ್ ಬೇಡ. ನಮಗೆ ಹಳೆಯ ದಿನಗಳನ್ನು ಅವರು ವಾಪಸ್ ಕೊಟ್ಟರೆ ಸಾಕು. ಈಗ ಪೆಟ್ರೊಲ್‌ ಬೆಲೆ, ಅಡುಗೆ ಎಣ್ಣೆ, ಅಡುಗೆ ಅನಿಲಗಳ ಬೆಲೆಗಳನ್ನು ಹಿಂದೆ ಇದ್ದಷ್ಟು ಮಾಡಿದರೆ ಸಾಕು’ ಎಂದರು.

ಕನ್ನಡ ನೆಲ, ಜಲ, ಭಾಷೆ ಉಳಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಪಕ್ಷ ಬಿಟ್ಟು ಜೆಡಿಎಸ್‌ನ್ನು ಜನರು ಬೆಂಬಲಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಜಿಎಸ್‌ಟಿ ಹೇರಿಕೆಯಿಂದ ವ್ಯಾಪಾರ ಇಲ್ಲ, ಲಾಭವೂ ಇಲ್ಲ. ಮಸಾಲೆದೋಸೆಗೂ ಜಿಎಸ್‌ಟಿ ಹಾಕಲಾಗಿದೆ. ಎಸಿ ಒಳಗೆ ಒಂದು ಹೊರಗೆ ಮತ್ತೊಂದು. ನಿಜಕ್ಕೂ ಬಡವರ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಮಂಗಳೂರಿನಲ್ಲಿ ಅಮಾಯಕರು ಸಾಯುತ್ತಿದ್ದಾರೆ, ಕಾಶ್ಮೀರದಲ್ಲೂ ನಿರಂತರ ಸಾವು ನೋವು ಸಂಭವಿಸುತ್ತಿದೆ. ಮುಸ್ಲಿಮರು ಸತ್ತಾಗ ಅವರ ಮನೆಗೆ ಬಿಜೆಪಿಯವರು ಹೋಗುವುದಿಲ್ಲ. ಎಲ್ಲರೂ ಇಂತಿಂಥ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಬಂದಿರುತ್ತೇವಾ’ ಎಂದು ಪ್ರಶ್ನಿಸಿದ ಅವರು, ‘ನಮ್ಮದು ಮಾನವಧರ್ಮ’ ಎಂದು ಪ್ರತಿಪಾದಿಸಿದರು.

ಒಂದು ವೇಳೆ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಪೆಟ್ರೋಲ್ ದರವನ್ನು ಲೀಟರ್‌ಗೆ ₹ 50ಕ್ಕೆ ಇಳಿಸಲಿ ನೋಡೋಣ ಎಂದೂ ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT