ಬುಧವಾರ, ನವೆಂಬರ್ 25, 2020
19 °C

‘ಡ್ರೀಮ್ 11’ ಆನ್‌ಲೈನ್ ಕ್ರಿಕೆಟ್ ಆಟದಲ್ಲಿ ಕೊಡಗಿನ ರಫೀಕ್‌ಗೆ 7.94 ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಐ‍ಪಿಎಲ್‌ 2020ರ ಆವೃತ್ತಿಯನ್ನು ಪಾಯೋಜಿಸಿರುವ ‘ಡ್ರೀಮ್ 11’ ಆನ್‌ಲೈನ್ ಕ್ರಿಕೆಟ್ ಆಟ ಆಯೋಜಿಸಿದ್ದು ಅದರಲ್ಲಿ ಮೂರ್ನಾಡು ಸಮೀಪದ ಬೇತ್ರಿ ಗ್ರಾಮದ ರಫೀಕ್ ಅವರು ಈ ಆಟದಲ್ಲಿ ₹ 7.94 ಲಕ್ಷ ಗೆದ್ದಿದ್ದಾರೆ.

ಈಚೆಗೆ ಯಎಇನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೈದರಾಬಾದ್- ಮುಂಬೈ ತಂಡಗಳ ನಡುವಿನ ಪಂದ್ಯದಲ್ಲಿ ಆನ್‌ಲೈನ್ ಮೂಲಕ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದು ‘ಡ್ರೀಮ್ 11’ನಲ್ಲಿ ₹ 1 ಕೋಟಿ ವಿಜೇತರಾದ 16 ಮಂದಿ ಸ್ಪರ್ಧಿಗಳಲ್ಲಿ ರಫೀಕ್ ಒಬ್ಬರಾಗಿದ್ದಾರೆ.

ವಿಜೇತ ಹದಿನಾರು ಸ್ಪರ್ಧಿಗಳಿಗೆ ತಲಾ ₹ 7.94 ಲಕ್ಷ ದೊರೆತಿದೆ. ರಫೀಕ್ ಬೇತ್ರಿ ಗ್ರಾಮದಲ್ಲಿ ದಿನಸಿ ಅಂಗಡಿಯ ಮಾಲೀಕರಾಗಿದ್ದು ವ್ಯಾಪಾರ ನಡೆಸುತ್ತಿದ್ದರು. ಲಾಕ್‌ಡೌನ್ ಅವಧಿಯಲ್ಲಿ ವ್ಯಾಪಾರ ಇಳಿಮುಖಗೊಂಡು ಸಂಕಷ್ಟದ ಪರಿಸ್ಥಿತಿ ಇತ್ತು. ‘ಡ್ರೀಮ್ 11’ ಗೆಲುವು ಸಂತಸ ತಂದಿದೆ ಎಂದು ರಫೀಕ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು