ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಸ್ಟೋ ಬಾಲ್‌‌‌ನಲ್ಲಿ ಇರ್ಷಾದ್ ಸಾಧನೆ

Published 12 ಜೂನ್ 2024, 6:07 IST
Last Updated 12 ಜೂನ್ 2024, 6:07 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ನಡೆದ ದಕ್ಷಿಣ ಏಷ್ಯಾ ಸೆಸ್ಟೋಬಾಲ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಇರ್ಷಾದ್ ಮುಸ್ತಾಪ ಅವರು ಚಿನ್ನದ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜೂ7 ರಿಂದ 9ರವರೆಗೆ ನಡೆದ 20ರಿಂದ 24 ವಯೋಮಿತಿ ವಿಭಾಗದ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನಪಡೆದು ತಂಡ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದಿತ್ತು.

ಇರ್ಷಾದ್ ಮುಸ್ತಫಾ ಸುಂಟಿಕೊಪ್ಪ ನಿವಾಸಿ ದಿವಂಗತ ಜಾವಮನೆ ಮುಸ್ತಾಫ ಮತ್ತು ರಹಿಮತ್ ದಂಪತಿ ಪುತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT