ಹಲವು ಐನ್‌ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ಸಾಂಪ್ರದಾಯಿಕವಾಗಿ ಆಯುಧಗಳನ್ನು ಪೂಜಿಸಿದರು. ಭತ್ತದ ನಾಟಿ ಮುಗಿದ ನಂತರ ಕೃಷಿ ಪರಿಕರಗಳಿಗೆ ಹಾಗೂ ಆಯುಧಗಳಿಗೆ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಸೇರಿದ ಪೂಜಿಸುವ ವಿಶಿಷ್ಟವಾದ ಈ ಹಬ್ಬದಲ್ಲಿ ಕೇವಲ ಕುಟುಂಬಸ್ಥರು ಮಾತ್ರವಲ್ಲ ಬಂಧುಗಳು, ಸ್ನೇಹಿತರೂ ಪಾಲ್ಗೊಂಡರು.