ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ನಗೆಗಡಲಿನಲ್ಲಿ ತೇಲಿದ ವಿದ್ಯಾರ್ಥಿಗಳು

Published 11 ನವೆಂಬರ್ 2023, 5:52 IST
Last Updated 11 ನವೆಂಬರ್ 2023, 5:52 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳನ್ನು ಕಲಾವಿದ ಮಿಮಿಕ್ರಿ ದಯಾನಂದ್ ಅವರು ನಗೆಗಡಲಿನಲ್ಲಿ ತೇಲಿಸಿದರು.

ದೀಪಾವಳಿಯಲ್ಲಿ ಪಟಾಕಿ ಸಿಡಿಯುವಂತೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ಜನಮನ ರಂಜಿಸಿದರು. ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರೂ ಅಕ್ಷರಶಃ ನಗುವಿನ ಅಲೆಯಲ್ಲಿ ತೇಲಿದರು.

ಈ ದೃಶ್ಯಗಳು ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ‘ಕಲಾಸ್ಮೃತಿ’ ಕನ್ನಡ ಕಾರ್ಯಕ್ರಮದಲ್ಲಿ ನಡೆಯಿತು.

ಹಾಸ್ಯದ ರಸಗವಳವನ್ನು ಉಣಬಡಿಸುವುದರ ಜತೆಗೆ ದಯಾನಂದ್ ಅವರು ನಗುವಿನ ಮಹತ್ವ ಕುರಿತೂ ಮಾತನಾಡಿದರು.

‘ಪ್ರತಿಯೊಬ್ಬರಲ್ಲೂ ಆರೋಗ್ಯಕರ ನಗು ಇರಬೇಕು, ನೋವಿನ ನಗು ಇರಬಾರದು, ಮಹಿಳೆಯರಿಗೆ ಗೌರವ ಕೊಡಬೇಕು, ಹಸಿವು, ನೋವು ಅವಮಾನ ಎದುರಿಸಿದವರು ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿರುವ ಬಗ್ಗೆ ಶ್ಲಾಘಿಸಿದರು.

ಒಬ್ಬ ವ್ಯಕ್ತಿಗೆ ಹೆತ್ತ ತಾಯಿ ಯಾವ ರೀತಿ ಶ್ರೇಷ್ಟಳೊ ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ತನ್ನ ನೆಲ, ತನ್ನ ಭಾಷೆ, ತನ್ನ ರಾಜ್ಯ ಶ್ರೇಷ್ಟವಾಗಿದ್ದು ಯಾವುದೇ ಕಾರಣಕ್ಕೂ ಮರೆಯಬಾರದು. ಎಲ್ಲರಿಗೂ ಗೌರವ ಕೊಡಬೇಕು. ಆಚಾರ ವಿಚಾರಗಳನ್ನು ಬಿಟ್ಟು ಕೊಡಬಾರದು. ಯಾರ ಮನಸ್ಸಿಗೂ ಗಾಯ ಮಾಡುವ ರೀತಿ ಮಾತನಾಡಬಾರದು. ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ಮಾತ್ರ ಅಲ್ಲದೆ ಈ ರಾಜ್ಯದಲ್ಲಿರುವ ಪ್ರತಿಯೊಬ್ಬರು ಕೂಡ ಸಂಭ್ರಮಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಕೆ.ಬಿ.ಕಾರ್ಯಪ್ಪ, ಮುಖ್ಯ ಆಡಳಿತಾಧಿಕಾರಿ ಎ.ಎಲ್.ಸ್ವಾಮಿ, ಪ್ರಾಂಶುಪಾಲ ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ನಂಜುಂಡಯ್ಯ, ಸ್ಥಾನೀಯ ವೈದ್ಯಾಧಿಕಾರಿಗಳಾದ ವಿ.ಎಸ್.ಸತೀಶ್, ಕನ್ನದ ಸಂಘ ಸಂಚಾಲಕ ಡಾ.ಮಂಜುನಾಥ್, ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಇದ್ದರು.

ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಾಗಿ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿದ ದಯಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT