ಶನಿವಾರಸಂತೆ: ಶಿವಮೊಗ್ಗದಲ್ಲಿ ಈಚೆಗೆ ನಡೆದ 5ನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಷರೀಣಿ ಎ.ಶೆಟ್ಟಿ ಹಾಗೂ 1ನೇ ತರಗತಿಯ ವಿದ್ಯಾರ್ಥಿನಿ ವಿವಿಕ್ತ ಚೋಂಮ್ಮ ಬೆಳ್ಳಿ ಪದಕ ಪಡೆದುಕೊಂಡರು.
ಇವರಿಬ್ಬರಿಗೆ ಟ್ರೆಡಿಷನಲ್ ಶೋಟೋಕಾನ್ ಸಂಸ್ಥೆಯ ಎಂ.ಸಿ.ಸುದರ್ಶನ್ ತರಬೇತಿಯನ್ನು ನೀಡಿದ್ದರು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.