ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಮದೆನಾಡು ಸಮೀಪ ಗುಡ್ಡ ಕುಸಿತ, ಸ್ಥಳೀಯರಲ್ಲಿ ಆತಂಕ

Last Updated 23 ಜುಲೈ 2022, 6:52 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಮದೆನಾಡು ಸಮೀಪ ಸೀಮೆಹುಲ್ಲು ಕಜೆ ಗುಡ್ಡದ ಒಂದು ಪಾರ್ಶ್ವ ಕುಸಿದಿದ್ದು, ಆತಂಕ ಮೂಡಿಸಿದೆ. ಗುಡ್ಡದ ಕೆಳಭಾಗದಲ್ಲಿ ವಾಸ ಇದ್ದ ಎರಡು ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮಣ್ಣು ಕೆಳಗೆ ಜರಿಯುತ್ತಿದ್ದು, ಕೆಸರುಮಿಶ್ರಿತ ನೀರು ಜೋಡುಪಾಲ ಹೊಳೆಗೆ ಸೇರುತ್ತಿದೆ.

ನಸುಕಿನಲ್ಲಿ ಭಾರಿ ಶಬ್ದ ಕೇಳಿ ಬಂದಿತು. ನಂತರ, ಬೆಳಿಗ್ಗೆ ನೋಡಿದಾಗ ಗುಡ್ಡದ ಒಂದು ಪಾರ್ಶ್ವ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಹಶೀಲ್ದಾರ್ ಮಹೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಗುಡ್ಡದ ಒಂದು ಪಾರ್ಶ್ವದಲ್ಲಿ ಸ್ವಲ್ಪ ಕುಸಿತ ಉಂಟಾಗಿದೆ. ಇದು ಕಾಡಿನ ಪ್ರದೇಶವಾಗಿರುವುದರಿಂದ ಯಾರಿಗೂ ಅಪಾಯ ಉಂಟಾಗಿಲ್ಲ’ ಎಂದು ಹೇಳಿದರು.

ಸ್ಥಳಕ್ಕೆ ತೆರಳಿದ್ದ ಗ್ರಾಮಲೆಕ್ಕಿಗ ರಮೇಶ್ ಪ್ರತಿಕ್ರಿಯಿಸಿ, ‘ಗುಡ್ಡದ ಪಾರ್ಶ್ವ ಕುಸಿದಿರುವ ಸ್ಥಳವನ್ನು ತಲುಪಲಾಗುತ್ತಿಲ್ಲ. ವಿಪರೀತ ಜಿಗಣೆಗಳು, ಕೆಸರು ತುಂಬಿಕೊಂಡಿದೆ. ಸದ್ಯ, ಕೆಸರುಮಿಶ್ರಿತ ನೀರು ಹರಿಯುವುದು ಕಡಿಮೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುಡ್ಡದ ಕೆಳಭಾಗದಲ್ಲಿದ್ದ ಎರಡು ಕುಟುಂಬದ ಸದಸ್ಯರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ’ ಎಂದು ತಿಳಿಸಿದರು.

ಇಲ್ಲಿಗೆ ಎರಡು ಕಿ.ಮೀ ದೂರದ 2ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶದ ರಾಮಕೊಲ್ಲಿ ಸಮೀಪ ಬಿರುಕುಗಳು ಮೂಡಿರುವುದನ್ನು ಭೂವಿಜ್ಞಾನಿಗಳ ತಂಡ ಖಚಿತಪಡಿಸಿದೆ. ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಎನ್‍ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT