ಸಿದ್ದಾಪುರ: ನೆಲ್ಯಹುದಿಕೇರಿ-ಸಿದ್ದಾಪುರ ವ್ಯಾಪ್ತಿಯ ಆಟೊ ಚಾಲಕರನ್ನು ಒಳಗೊಂಡ ಕಾವೇರಿ ಆಟೊ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಎ.ಎಸ್.ಹುಸೈನ್ ಆಯ್ಕೆಯಾಗಿದ್ದಾರೆ.
ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಉಪಾಧ್ಯಕ್ಷರಾಗಿ ಬೆಳ್ಯಪ್ಪ, ವಿನೋದ್, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್, ಖಜಾಂಚಿಯಾಗಿ ರಶಾದ್ ಹಾಗೂ ಸಮಿತಿ ಸದಸ್ಯರಾಗಿ 25 ಮಂದಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ಹುಸೈನ್, ಆಟೊ ಚಾಲಕರು ಹತ್ತಾರು ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಚಾಲಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡಲಿದೆ ಎಂದರು.