ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ರೋಟರಿ ಸಂಸ್ಥೆಯಿಂದ ಅಂಗನವಾಡಿಗಳಿಗೆ ಕಾಯಕಲ್ಪ

ಕೊಡಗು ಜಿಲ್ಲೆಗೆ ಭೇಟಿ ನೀಡಿದ ರೋಟರಿ ಜಿಲ್ಲೆ 3181ನ ಗವರ್ನರ್ ಎಚ್.ಆರ್.ಕೇಶವ್
Published 15 ಫೆಬ್ರುವರಿ 2024, 7:16 IST
Last Updated 15 ಫೆಬ್ರುವರಿ 2024, 7:16 IST
ಅಕ್ಷರ ಗಾತ್ರ

ಮಡಿಕೇರಿ: ಅಂಗನವಾಡಿಗಳ ಕಾಯಕಲ್ಪಕ್ಕೆ ರೋಟರಿ ಸಂಸ್ಥೆ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ರೋಟರಿ ಜಿಲ್ಲೆ 3181ನ ಗವರ್ನರ್ ಎಚ್.ಆರ್.ಕೇಶವ್ ತಿಳಿಸಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಗನವಾಡಿಗಳು ಬಹಳ ಮುಖ್ಯ. ಇಂತಹ ಅಂಗನವಾಡಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಚೌಡೇಶ್ವರಿ ದೇಗುಲದ ಸಮೀಪ ಹಾಗೂ ಸುದರ್ಶನ್ ವೃತ್ತದ ಬಳಿ ಅಂಗನವಾಡಿಗಳಿಗೆ ಪರಿಕರಗಳು ಹಾಗೂ ಮೇಕೇರಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಗುವುದು’ ಎಂದು ಅವರು ತಿಳಿಸಿದರು.

‘ವಿಶ್ವಮಟ್ಟದಲ್ಲಿ ಪೋಲಿಯೊ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಬಹಳ ಮುಖ್ಯ ಪಾತ್ರ ವಹಿಸಿದೆ. ಪ್ರಸ್ತುತ ಕೇವಲ 10 ಪೋಲಿಯೊ ಪ್ರಕರಣಗಳು ಮಾತ್ರ ಜಗತ್ತಿನಲ್ಲಿ ವರದಿಯಾಗಿದೆ. ಪೋಲಿಯೊ ನಿರ್ಮೂಲನೆ ಮೂಲಕ ಪೋಲಿಯೊ ಮುಕ್ತ ವಿಶ್ವಕ್ಕಾಗಿ ರೋಟರಿ ಅನೇಕ ವರ್ಷಗಳಿಂದ ಬಹಳ ಮುಖ್ಯ ಪಾತ್ರ ವಹಿಸಿದೆ’ ಎಂದು ಅವರು ವಿವರಿಸಿದರು.

ರೋಟರಿ ಜಿಲ್ಲೆ 3181ಕ್ಕೆ ಸಂಬಂಧಿಸಿದಂತೆ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಕಂದಾಯ ಜಿಲ್ಲೆಗಳಲ್ಲಿ 87 ರೋಟರಿ ಸಂಸ್ಥೆಗಳಿದ್ದು, 3,800 ಸದಸ್ಯರನ್ನು ಹೊಂದಿದೆ. ಈ ಸಂಸ್ಥೆಗಳಲ್ಲಿ ಅಂಗನವಾಡಿಗಳಿಗೆ ಸೌಕರ್ಯ ಸೇರಿದಂತೆ ಮಳೆ ಕೊಯ್ಲುವಿನಂತಹ ವಿಭಿನ್ನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

‘ಸದಾ ಬದಲಾಗುತ್ತಲೇ ಸಾಗುತ್ತಿರುವ ಇಂದಿನ ಸಮಾಜದಲ್ಲಿ ರೋಟರಿಯಂತಹ ಸಂಸ್ಥೆಗಳು ಕೂಡ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಬದಲಾವಣೆಯೊಂದಿಗೆ ಸಾಗಬೇಕಾದ ಅನಿವಾರ್ಯತೆ ಇದೆ’ ಎಂದು ಅವರು ಪ್ರತಿಪಾದಿಸಿದರು.

‘ಸಮಾಜದಲ್ಲಿ ಪ್ರತಿಯೊಬ್ಬರೂ ರೋಟರಿ ಇರಬಹುದು ಅಥವಾ ತಮಗಿಷ್ಟವಾದ ಯಾವುದಾದರೂರೂ ಸೇವಾ ಸಂಸ್ಥೆಗಳಲ್ಲಿ ಬಡವರಿಗಾಗಿ, ಅಗತ್ಯವಿದ್ದವರಿಗಾಗಿ ಸೇವಾ ಚಟುವಟಿಕೆಗಳನ್ನು ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ‘10 ವರ್ಷಗಳಿಂದ ರೋಟರಿ ಮಿಸ್ಟಿ ಹಿಲ್ಸ್‌ನಿಂದ ಮಕ್ಕಳ ದಸರಾವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬರಲಾಗಿದೆ. ಈ ವರ್ಷವೂ ಅನೇಕ ಅಂಗನವಾಡಿ ಕೇಂದ್ರಗಳಿಗೆ ನೆರವು ನೀಡಲಾಗಿದೆ. ವೈದ್ಯಕೀಯ, ಆರೋಗ್ಯ ಸೇವಾ ಯೋಜನೆಗಳನ್ನೂ ಮಿಸ್ಟಿ ಹಿಲ್ಸ್ ವತಿಯಿಂದ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಮಿಸ್ಟಿ ಹಿಲ್ಸ್  ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT