ಸೋಮವಾರಪೇಟೆ: ಕಳೆದ ವರ್ಷ ಅತಿವೃಷ್ಟಿಯಿಂದ ತತ್ತರಿಸಿದ ಕೊಡಗುಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಆರಂಭಗೊಂಡು ಒಂದು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂಗಾರು ಮಳೆಯ ಕೊರತೆಯಿಂದ ಭತ್ತದ ಕಣಜವೆಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ಭತ್ತದ ಕೃಷಿಗೆ ತೀವ್ರ ಹಿನ್ನೆಡೆಯಾಗಿದ್ದು, ಹೆಚ್ಚಿನ ಕೃಷಿಕರು ಭತ್ತದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ.

ಮುಂಗಾರು ವಿಳಂಬ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ರೋಗಬಾಧೆ ಹಾಗೂ ಫಸಲು ನಷ್ಟದ ಭೀತಿಯಿಂದ ಕೆಲವು ಸಂದರ್ಭ ಹಾಕಿದ ಬಂಡವಾಳವೂ ಹಿಂದಕ್ಕೆ ಬರುವುದಿಲ್ಲ. ಇದರಿಂದ ಬಹತೇಕ ಭತ್ತದ ಬೆಳೆಗಾರರು ಗದ್ದೆಗಳನ್ನು ಸಮತಟ್ಟು ಮಾಡಿ ಕಾಫಿ, ಬಾಳೆ ಕೃಷಿಯನ್ನು ಮಾಡಲು ಮುಂದಾಗಿದ್ದಾರೆ.

ಈ ಸಾಲಿನಲ್ಲಿ ಮಳೆಯ ಕೊರತೆಯಿಂದ ಕೆಲವರು ಮಾತ್ರ ಗದ್ದೆಯನ್ನು ಉಳುಮೆ ಕಾರ್ಯ ಮಾಡಿದ್ದಾರೆ. ಹೆಚ್ಚಿನವರು ಇಂದಿಗೂ ಗದ್ದೆಯತ್ತ ಮುಖ ಮಾಡಿಲ್ಲ. ನೀರಿನ ಸೌಲಭ್ಯ ಇದ್ದವರು ನಾಟಿ ಕಾರ್ಯವನ್ನು ಪೂರೈಸಿದ್ದಾರೆ. ಉಳಿದವರು ಬೀಜವನ್ನು ಬಿತ್ತಿ ಮಳೆಗಾಗಿ ಕಾಯುತ್ತಿದ್ದಾರೆ.

ಕಳೆದ ವರ್ಷ ಈ ಸಮಯಕ್ಕೆ ಜಿಲ್ಲೆಯಲ್ಲಿ ಸರಾಸರಿ 2,054 ಮಿಮಿ ಮಳೆಯಾಗಿದ್ದರೆ, ಈ ವರ್ಷ ಕೇವಲ ಸರಾಸರಿ 704 ಮಿಮಿ ಮಳೆ ಆಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಳೆದ ವರ್ಷ 1596.3 ಮಿ.ಮಿ ಮಳೆ ಆಗಿದ್ದರೆ, ಈ ವರ್ಷ ಕೇವಲ 419.23 ಮಿಮಿ ಮಳೆ ಆಗಿದೆ. ಈವರೆಗೆ ತಾಲ್ಲೂಕಿನಲ್ಲಿ ಶೇಕಡಾ 35ರಷ್ಟು ಮಾತ್ರ ಸಸಿಮಡಿ ಮಾಡಲಾಗಿದೆ. ಗದ್ದೆಗಳಿಗೆ ಇನ್ನೂ ಸರಿಯಾಗಿ ಮಳೆಯಾಗದ ಕಾರಣ ಭತ್ತದ ಕೃಷಿಗೆ ಹಿನ್ನೆಡೆಯಾಗಿದೆ. ಈ ಬೆಳೆಗೆ ಅಪಾರ ಪ್ರಮಾಣದ ನೀರು ಬೇಕಾಗಿದ್ದು, ಈಗ ದೀರ್ಘಾವಧಿ ಭತ್ತದ ಕೃಷಿಯನ್ನು ಬಿಟ್ಟು ಅಲ್ಪಾವಧಿ ಭತ್ತದ ಕೃಷಿ ಮಾಡಬೇಕಿದೆ ಎಂದು ರೈತರು ತಿಳಿಸಿದರು.

ಚೇತರಿಕೆ ಕಾಣದ ಕೃಷಿ: ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ಉತ್ತಮ ಇಳುವರಿ ಸಿಗುತ್ತಿತ್ತು. ಆದರೆ, ಶಾಂತಳ್ಳಿ ಹೋಬಳಿಯಲ್ಲಿ ಮಾತ್ರ ಮನೆ ಬಳಕೆಗೆ ಭತ್ತವನ್ನು ಬೆಳೆಯಲಾಗುತ್ತಿದೆ. ಅತಿಹೆಚ್ಚು ಮಳೆ ಬೀಳುವ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ಭತ್ತ ಕೃಷಿಯನ್ನು ಮುಂದುವರಿಸಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಕಾರಣ ಕಾಫಿಗೆ ಹವಾಮಾನ ಪೂರಕವಾಗಿಲ್ಲ. ಏಲಕ್ಕಿಗೆ ಕೊಳೆರೋಗ ಬಾಧೆ ಕಾಡುತ್ತಿರುವುದರಿಂದ, ಕೃಷಿಕರು ಭತ್ತ ಕೃಷಿಯನ್ನು ಮುಂದುವರಿಸಿದ್ದಾರೆ.

ಹರಗ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಹೆಗ್ಗಡ ಮನೆ, ಮಲ್ಲಳ್ಳಿ, ಕೊತ್ತನಳ್ಳಿ, ನಾಡ್ನಳ್ಳಿ ಸೇರಿದಂತೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಕಾಡಾನೆ, ಕಾಡುಕೋಣಗಳ ಕಾಟವಿದೆ. ಭತ್ತವನ್ನು ಬೆಳೆದು, ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಂಡು ಹೋಗುವ ದುಸ್ಥಿತಿಯಿದೆ. ಹೀಗಿದ್ದರೂ, ಭತ್ತದ ಭೂಮಿಯನ್ನು ಪಾಳುಬಿಟ್ಟಿಲ್ಲ.

ವಾಣಿಜ್ಯ ಬೆಳೆಯತ್ತ ದೃಷ್ಟಿ:ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ಕೃಷಿಕರು, ಜೂನ್ ನಿಂದ ಮೂರು ತಿಂಗಳು ಭತ್ತ ಗದ್ದೆಯ ಕೆಲಸಕ್ಕೆ ಮೀಸಲಿಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹವಾಮನ ವೈಪರಿತ್ಯದಿಂದ ಭತ್ತದ ಇಳುವರಿ ಕಡಿಮೆಯಾಗಿ, ಬೆಳೆ ಬೆಳೆದ ಸಂದರ್ಭ ಮಳೆಯಾಗಿ ನಷ್ಟವಾಗುವುದು ಸಾಮಾನ್ಯ. ಇದರೊಂದಿಗೆ ಅಕ್ಕ ಪಕ್ಕದ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಇದರ ಮಧ್ಯಭಾಗದಲ್ಲಿ ಸಿಲುಕುವ ಕೃಷಿಕರು ಅನಿವಾರ್ಯವಾಗಿ ತೋಟಗಾರಿಕಾ ಬೆಳೆಯತ್ತ ಸಾಗಬೇಕಾಗಿದೆ.

ಸುತ್ತಲು ಕಾಫಿ ತೋಟಗಳಿದ್ದು, ಮಧ್ಯದಲ್ಲಿರುವ ಗದ್ದೆಗಳಲ್ಲಿ ಭತ್ತ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ತೋಟದ ನೆಪದಲ್ಲಿ ಗದ್ದೆಗಳಿಗೆ ನೀರು ಬರುವ ಕೊಲ್ಲಿ, ತೊರೆಗಳನ್ನು ಮುಚ್ಚಲಾಗಿದೆ. ಕಾಫಿ ತೋಟದ ನೆರಳಿನಿಂದ ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯುದಿಲ್ಲ ಎಂದು ನೊಂದ ರೈತರು ಹೇಳುತ್ತಾರೆ.

ಕುಸಿಯುತ್ತಿದೆ ಕೃಷಿಭೂಮಿ:ತಾಲ್ಲೂಕಿನಲ್ಲಿ 11,870ಹೆಕ್ಟೇರ್ ಭತ್ತದ ಭೂಮಿಯಲ್ಲಿ 2014-15ನೇ ಸಾಲಿನಲ್ಲಿ 9,890 ಹೆಕ್ಟೇರ್ ಭೂಮಿಯಲ್ಲಿ ಭತ್ತ ನಾಟಿ ಕಾರ್ಯ ನಡೆದಿತ್ತು. 1,980 ಹೆಕ್ಟೇರ್ ಭತ್ತ ಭೂಮಿಯಲ್ಲಿ ನಾಟಿ ಮಾಡಿರಲಿಲ್ಲ. 2015-16ನೇ ಸಾಲಿನಲ್ಲಿ 10,590ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ.

1,280 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆದಿಲ್ಲ. 2016-17ನೇ ಸಾಲಿನಲ್ಲಿ ಇಲ್ಲಿಯವರಗೆ 5,200 ಹೆಕ್ಟೇರ್ ನಲ್ಲಿ ಭತ್ತ ನಾಟಿ ಕಾರ್ಯ ನಡೆದಿತ್ತು. 17-18ನೇ ಸಾಲಿನಲ್ಲಿ 9 ಸಾವಿರ ಹೆಕ್ಟೇರ್ ಮಾತ್ರ ಭತ್ತದ ಕೃಷಿ ನಡೆದಿದ್ದರೆ, ಪ್ರಸಕ್ತ ಸಾಲಿನಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆ ಇದೆ. ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿಪ್ರಮಾಣ ಇಳಿಕೆಯಾಗುತ್ತಿರುವ ವೇಗ ನೋಡಿದರೆ, ಭತ್ತದ ಕೃಷಿಯೇ ಮಾಯಾವಾದರೂ ಅಚ್ಚರಿಯಿಲ್ಲ.

ಭತ್ತಕ್ಕೆ ಬೆಲೆಯಿಲ್ಲ, ಮುಂಗಾರು ಮಳೆಯನ್ನು ನಂಬಿ ಭತ್ತ ಕೃಷಿ ಮಾಡಲು ಅಸಾಧ್ಯ. ಭತ್ತದ ಬೆಂಬಲ ಬೆಲೆಯನ್ನು ದ್ವಿಗುಣ ಗೊಳಿಸಬೇಕಾಗಿದೆ. ಭತ್ತ ಭೂಮಿಯನ್ನು ಮುಚ್ಚಿದರೆ ಅಂತರ್ಜಲ ಮಟ್ಟ ಕುಸಿಯುವ ಸಮಸ್ಯೆ ಎದುರಾಗಲಿದೆ.
-ಡಾ. ಎಚ್.ಎಸ್.ರಾಜಶೇಖರ್. ಸಹಾಯಕ ಕೃಷಿ ನಿರ್ದೇಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.