ಮಡಿಕೇರಿ: ಮಂಡೇಪಂಡ ಮತ್ತು ಚೇಂದಂಡ ತಂಡಗಳು ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿವೆ.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆದ ಸೆಮಿಫೈನಲ್ನಲ್ಲಿ 14 ವರ್ಷ ವಯಸ್ಸಿನ ಗೋಲ್ಕೀಪರ್ ಡ್ಯಾನ್ ಬೆಳ್ಯಪ್ಪ ಅವರ ಅಮೋಘ ಆಟದ ನೆರವಿನಿಂದ ಮಂಡೇಪಂಡ ತಂಡವು ನೆಲ್ಲಮಕ್ಕಡ ತಂಡವನ್ನು ಮಣಿಸಿತು.

ಉಭಯ ತಂಡಗಳು ನಿಗದಿತ ಅವಧಿಯಲ್ಲಿ ತಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿದವು. ಟೈಬ್ರೇಕರ್ನಲ್ಲಿ 4–1 ಅಂತರದಿಂದ ಮಂಡೇಪಂಡ ಗೆಲುವು ಸಾಧಿಸಿತು. ಗೋಲ್ಕೀಪರ್ ಡ್ಯಾನ್ ಬೆಳ್ಯಪ್ಪ ಎದುರಾಳಿ ತಂಡದ 2 ಗೋಲುಗಳನ್ನು ತಡೆದು ಗಮನ ಸೆಳೆದರು.

ಮತ್ತೊಂದು ಸೆಮಿಫೈಲ್ನಲ್ಲಿ ಚೇಂದಂಡ 3-1ರಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿತು. ವಿಜೇತ ತಂಡದ ಪರ ನಿಕಿನ್ ತಿಮ್ಮಯ್ಯ 1 ಹಾಗೂ ತಮ್ಮಯ್ಯ 2 ಗೋಲುಗಳನ್ನು ಗಳಿಸಿದರು. ಕುಪ್ಪಂಡ (ಕೈಕೇರಿ) ಪರವಾಗಿ ನಾಚಪ್ಪ 1 ಗೋಲು ಗಳಿಸಿದರು.

ಭಾನುವಾರ ( ಏ. 27) ಮಂಡೇಪಂಡ ಮತ್ತು ಚೇಂದಂಡ ನಡುವೆ ಮುದ್ದಂಡ ಕಪ್ಗಾಗಿ ಸೆಣಸಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.