ಮಡಿಕೇರಿ: ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ‘ಪ್ರಸ್ತುತ 396 ತಂಡಗಳು ಆಟವಾಡಿದ್ದು, ಮುಂದೆ ಈ ಸಂಖ್ಯೆ 500ಕ್ಕೆ ಏರಿಕೆಯಾಗುವ ಸಾಧ್ಯತೆಗಳಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಅಂಪೈರ್ಗಳ ಅಗತ್ಯವಿದ್ದು, ಆಸಕ್ತರು ಮುಂದೆ ಬರಬೇಕು, ಅಕಾಡೆಮಿ ತರಬೇತಿ ನೀಡಲಿದೆ’ ಎಂದು ಹೇಳಿದರು.

ಕೊಡವ ಹಾಕಿ ಹಬ್ಬ ಕೊಡವರ ನಾಲ್ಕನೇ ಹಬ್ಬವಾಗಿ ನಿರಂತರ ನಡೆಯಬೇಕು. ಹಾಕಿ ಹಬ್ಬಕ್ಕೆ ₹ 3ರಿಂದ 4 ಕೋಟಿ ರೂ. ಖರ್ಚಾಗುತ್ತಿದೆ, ಸರ್ಕಾರ ₹ 1 ಕೋಟಿ ಮಾತ್ರ ನೀಡುತ್ತಿದೆ. ಇದು ಸಾಲದೆ ಇರುವುದರಿಂದ ₹ 2 ಕೋಟಿ ನೀಡಲಿ, ಕೇಂದ್ರದಿಂದ ವಿಶೇಷ ಅನುದಾನ ತರಲಿ ಎಂದರು.

ಕಳೆದ 25 ವರ್ಷಗಳಿಂದ ನಡೆದ ಕೊಡವ ಕೌಟುಂಬಿಕ ಹಾಕಿ ಹಬ್ಬದಲ್ಲಿ ಗೆಲುವು ಸಾಧಿಸಿದ ಮತ್ತು ಸೋತ ತಂಡಗಳ ನಡುವೆ ಅಕಾಡೆಮಿ ಮೂಲಕ ಪಂದ್ಯಾವಳಿ ನಡೆಸಲಾಗುವುದು ಎಂದು ತಿಳಿಸಿದರು.

2026 ರಲ್ಲಿ ನಾಪೋಕ್ಲುವಿಲ್ಲಿ ನಡೆಯುವ 26 ನೇ ವರ್ಷದ ಚೇನಂಡ ಕಪ್ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಪಾಂಡಂಡ ಬೋಪಣ್ಣ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.