ಸೋಮವಾರಪೇಟೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು–ಕೊರತೆ ಸಭೆಯು ಇನ್ಸ್ಪೆಕ್ಟರ್ ಮುದ್ದುಮಾದೇವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಅವರು, ‘ಹಿಂದಿನ ತಿಂಗಳಲ್ಲಿ ಹಲವು ಮುಖಂಡರು ತಿಳಿಸಿದ್ದ ಸಮಸ್ಯೆಗಳಿಗೆ ಕಾರ್ಯರೂಪದಲ್ಲಿ ಉತ್ತರ ನೀಡಿದ್ದೇವೆ. ಮದ್ಯ ಅಕ್ರಮ ಮಾರಾಟದ ಸಮಸ್ಯೆ ಬಗ್ಗೆ ಹೆಚ್ಚಿನ ದೂರುಗಳಿದ್ದವು, ಅದರಂತೆ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 8 ಲೀಟರ್ ಸರಾಯಿ, ಒಂದು ಬ್ಯಾರಲ್ ಸರಾಯಿ ಗಂಜಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ರಾಜಪ್ಪ ಮಾತನಾಡಿ, ‘ಅಬ್ಬಿಮಠ ಗ್ರಾಮದ ಬಸ್ ನಿಲ್ದಾಣ ಮತ್ತು ಯಡೂರು ಬಸ್ ನಿಲ್ದಾಣದಲ್ಲಿ ಬೀಡಿ, ಸಿಗರೇಟ್ ಪೊಟ್ಟಣದ ತ್ಯಾಜ್ಯ ಮತ್ತು ಮದ್ಯದ ಖಾಲಿ ಬಾಟಲ್ಗಳು ತುಂಬಿರುವ ಬಗ್ಗೆ ಸಭೆಯ ತಂದರು. ಇಲ್ಲಿ ಸಾರ್ವಜನಿಕರು ಕೂರಲು ಆಗದಂತಹ ಪರಿಸ್ಥಿತಿ ಇದೆ. ಸಂಜೆ ಆಗುತ್ತಲೇ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುಂಡರ ಹಾವಳಿ ಜಾಸ್ತಿಯಾಗಿದ್ದು, ಇಲಾಖೆ ಕಡಿವಾಣ ಹಾಕಬೇಕಿದೆ’ ಎಂದು ಮನವಿ ಮಾಡಿದರು.

ಎಸ್.ಎ.ಪ್ರತಾಪ್ ಮಾತನಾಡಿ, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಯೋಗೇಶ್, ಹೂವಯ್ಯ, ಪಿ.ಕೆ.ವಸಂತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.