ಪುರಸಭೆ ಕಟ್ಟಡ ಕಾಮಗಾರಿಗೆ ₹ 2 ಕೋಟಿ ವಿಶೇಷ ಅನುದಾನ ತಂದು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಜೂನ್ 11ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ
– ಡಾ.ಮಂತರ್‌ಗೌಡ, ಶಾಸಕ
ಪುರಸಭೆ ಕಚೇರಿ ಕಾಮಗಾರಿ ಬಹುತೇಕ ಪೂರ್ಣಗೊಂದಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಸಾವಿರಾರು ಹಣ ಖರ್ಚು ಮಾಡಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುವುದರಿಂದ ಮುಕ್ತಿ ಸಿಕ್ಕಿದೆ
ಜಯಲಕ್ಷ್ಮಿಚಂದ್ರು, ಅಧ್ಯಕ್ಷೆ, ಪುರಸಭೆ ಕುಶಾಲನಗರ
ಆಧುನಿಕ ಸೌಲಭ್ಯಗಳ ಸುಸಜ್ಜಿತ ಕಟ್ಟಡದ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ. ಶಾಸಕ ಡಾ.ಮಂತರ್‌ಗೌಡ ಅವರ ಪ್ರಯತ್ನದಿಂದ ಹೆಚ್ಚುವರಿ ₹ 2 ಕೋಟಿ ವಿನಿಯೋಗಿಸಿ ಪರಿಪೂರ್ಣ ಬಳಕೆಗೆ ಕಟ್ಟಡವನ್ನು ಸಜ್ಜುಗೊಳಿಸಲಾಗಿದೆ.
ವಿ.ಪಿ.ಶಶಿಧರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ