ಗೋಣಿಕೊಪ್ಪಲು: ‘ಕೊಡವ ಭಾಷೆ, ಸಂಸ್ಕೃತಿ, ಆಚರಣೆಗಳಿಗೆ ಪ್ರೋತ್ಸಾಹ ನೀಡಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕುಟ್ಟ ಕೊಡವ ಸಮಾಜದಲ್ಲಿ ನೂತನ ಪೊಮ್ಮಕ್ಕಡ ಕೂಟವನ್ನು ರಚನೆ ಮಾಡಲಾಗಿದೆ’ ಎಂದು ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ಕೊಡವ ಸಮಾಜಗಳ ಒಕ್ಕೂಟ ಮತ್ತು ಕುಟ್ಟ ಕೊಡವ ಸಮಾಜದ ಆಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಹಿಳೆಯರಲ್ಲಿ ಮಾತೃತ್ವದ ಜೊತೆಗೆ ಅಪಾರ ಪ್ರತಿಭೆಯೂ ಇದೆ. ಅದನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸುವ ದೃಷ್ಟಿಯಿಂದಲೂ ಪೊಮ್ಮಕ್ಕಡ ಕೂಟ ರಚಿಸಲಾಗಿದೆ’ ಎಂದರು.

ಕೂಟದ ಅಧ್ಯಕ್ಷರಾಗಿ ಮುಕ್ಕಾಟಿರ ಅರ್ಚನಾ ಮಾದಪ್ಪ, ಉಪಾಧ್ಯಕ್ಷೆಯಾಗಿ ಚೆಪ್ಪುಡಿರ ಚೇತನಾ ಬೋಪಣ್ಣ, ಕಾರ್ಯದರ್ಶಿಯಾಗಿ ಚೆಕ್ಕೇರ ದೇಚು ಕಾರ್ಯಪ್ಪ, ಜಂಟಿ ಕಾರ್ಯದರ್ಶಿಯಾಗಿ ಪಟ್ರಪಂಡ ತಾಂಜ್ ಕರುಂಬಯ್ಯ, ಖಜಾಂಚಿಯಾಗಿ ತೀತಿರ ರೇನಾ ಕಾರ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ನಿರ್ದೇಶಕರಾಗಿ ಕೋದಂಡ ಲೀಲಾ ಕಾರ್ಯಪ್ಪ, ಮಲ್ಲಂಡ ದಯಾ ಪ್ರಹ್ಲಾದ್, ಬಾಚರಣಿಯಂಡ ಬೀನಾ ಪ್ರಕಾಶ್, ತೀತಿರ ಬೃಂದಾ ಕಾರ್ಯಪ್ಪ, ತೀತಿರ ಜ್ಯೋತಿ ಕುಶಾಲಪ್ಪ, ಕೈಬುಲೀರ ಪ್ರೀತಿ ನಂಜಪ್ಪ ಆಯ್ಕೆಯಾದರು.

ಮುಖ್ಯ ಅತಿಥಿಯಾಗಿದ್ದ ಶಿಕ್ಷಕಿ ಕೋಟ್ರಂಗಡ ಸಜನಿ ಸೋಮಯ್ಯ ಮಾತನಾಡಿ, ‘ಎಲ್ಲರೂ ಒಂದೊಂದು ಪ್ರತಿಭೆ ಹೊಂದಿರುತ್ತಾರೆ. ಅದನ್ನು ಹೊರಗೆ ತರಲು ಸೂಕ್ತ ಪ್ರೋತ್ಸಾಹ ಹಾಗೂ ವೇದಿಕೆ ಅಗತ್ಯವಿದ್ದು, ಅದು ಪೊಮ್ಮಕ್ಕಡ ಕೂಟ ರಚನೆಯ ಮೂಲಕ ಸೃಷ್ಟಿಯಾಗಿದೆ. ಕೂಟದ ಸದುಪಯೋಗ ಪಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಕೂಟದ ಕಾರ್ಯದರ್ಶಿ ಚೆಕ್ಕೇರ ದೇಚು ಕಾರ್ಯಪ್ಪ, ಉಪಾಧ್ಯಕ್ಷೆ ಚೆಪ್ಪುಡೀರ ಚೇತನಾ ಬೋಪಣ್ಣ, ಸಮಾಜದ ಕಾರ್ಯದರ್ಶಿ ಕೊಂಗಂಡ ಸುರೇಶ್, ತೀತಿರ ಮಂದಣ್ಣ, ದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೇರ ರಾಬಿನ್ ಕಾರ್ಯಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.