ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಜೆಂಡ್ ಕಪ್ ಪುಟ್‌ಬಾಲ್‌: ‘ಒಂಟಿಯಂಗಡಿ ಭಜರಂಗಿ’ ಚಾಂಪಿಯನ್‌

Published 22 ಮೇ 2024, 4:47 IST
Last Updated 22 ಮೇ 2024, 4:47 IST
ಅಕ್ಷರ ಗಾತ್ರ

ಸಿದ್ದಾಪುರ: ಅಮ್ಮತ್ತಿ ಎ.ಎಫ್.ಸಿ ಸಂಘದ ವತಿಯಿಂದ ತಾಲ್ಲೂಕು ಮಟ್ಟದ 40 ವರ್ಷ ಮೇಲ್ಪಟ್ಟ ಆಟಗಾರರಿಗೆ ನಡೆದ ಲೆಜೆಂಡ್ ಫುಟ್‌ಬಾಲ್ ಪಂದ್ಯಾಟದಲ್ಲಿ ಒಂಟಿಯಂಗಡಿಯ ಭಜರಂಗಿ ತಂಡ ಪ್ರಥಮ ಸ್ಥಾನ ಪಡೆಯಿತು.

ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿರಾಜಪೇಟೆ ತಾಲ್ಲೂಕಿನ 8 ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ವಿರಾಜಪೇಟೆಯ ಆಕ್ಸ್‌ಫರ್ಡ್ ತಂಡವನ್ನು ಮಣಿಸಿ, ಭಜರಂಗಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮದ ಪ್ರಮುಖರಾದ ಬೊಮ್ಮಂಡ ರೋಷನ್, ‘ಲೆಜೆಂಡ್ ಪಂದ್ಯಾವಳಿಯಿಂದಾಗಿ ಹಿರಿಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತಾಗಿದೆ. ಹಿರಿಯ ಕ್ರೀಡಾಪಟುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಪಾಲಗೊಳ್ಳಬೇಕು’ ಎಂದು ಕರೆ ನೀಡಿದರು.

ಕ್ಲಬ್ ಅಧ್ಯಕ್ಷ ಹೆರಾಲ್ಡ್‌, ಪಂದ್ಯಾಟ ಆಯೋಜಕರಾದ ಸಜೀರ್ ಅಮ್ಮತ್ತಿ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT