ವಿರಾಜಪೇಟೆ: ‘ವಿರಾಜಪೇಟೆ ಕೊಡವ ಸೌಹಾರ್ದ ಸಹಕಾರಿಯಲ್ಲಿ ಸದಸ್ಯತ್ವವನ್ನು ಹೊಂದಿರುವ ನಿವೃತ್ತ ಹಾಗೂ ಹಾಲಿ ಯೋಧರ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಹಾಗೂ ಪಡೆದ ಸಾಲಕ್ಕೆ ಸಾಮಾನ್ಯ ಬಡ್ಡಿ ದರಕ್ಕಿಂತ ಹೆಚ್ಚಿನ ರಿಯಾಯತಿ ನೀಡಲಾಗುವುದು’ ಎಂದು ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಅವರು ತಿಳಿಸಿದರು.

ಪಟ್ಟಣದಲ್ಲಿನ ಸಹಕಾರಿಯ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,‘2024-25ನೇ ಸಾಲಿನ ಮಾರ್ಚ್ ಅಂತ್ಯದೊಳಗಿನ ಅಂತ್ಯದ ಲೆಕ್ಕಪರಿಶೋಧನಾ ವರದಿಯ ಪ್ರಕಾರ ಸಹಕಾರಿಯಲ್ಲಿ 1,325 ಸದಸ್ಯರು ಇದ್ದು, ₹97 ಲಕ್ಷ ಪಾಲು ಬಂಡವಾಳವಿದೆ. ಒಟ್ಟು ಠೇವಣಿ ₹8.40 ಕೋಟಿಗಳಾಗಿದ್ದು, ₹8 ಕೋಟಿ ಸಾಲ ವಿತರಿಸಲಾಗಿದೆ. ಶೇ 98ರಷ್ಟು ಸಾಲ ವಸೂಲಾಗಿದೆ’ ಎಂದರು.

‘2024-25ನೇ ಸಾಲಿನಲ್ಲಿ ಸಹಕಾರಿಯು ₹20.55 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಈ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ 10ರಷ್ಟು ಡಿವಿಡೆಂಡ್ ನೀಡಲಾಗುವುದು. ಸಂಸ್ಥೆಯ ಮಹಾಸಭೆ ಆ. 9ರಂದು ಬೆಳಿಗ್ಗೆ 10:30ಕ್ಕೆ ಬ್ಯಾಂಕ್ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದರು.

ಉಪಾಧ್ಯಕ್ಷ ಚೇಂದಂಡ ವಸಂತ್ ಕುಮಾರ್, ನಿರ್ದೇಶಕರಾದ ನೆಲ್ಲಮಕ್ಕಡ ಬೆಳ್ಯಪ್ಪ, ಕಾಂಡಂಡ ಚರ್ಮಣ, ಐನಂಡ ಗಣಪತಿ, ವಾಂಚಿರ ನಾಣಯ್ಯ, ಕೇಳಪಂಡ ವಿಶ್ವನಾಥ್, ಚೇಂದ್ರಿಮಾಡ ನಂಜಪ್ಪ, ಬೊಳ್ಯಪಂಡ ಸುರೇಶ್, ವಾಟೇರಿರ ಪೂವಯ್ಯ, ಕೊಂಗಂಡ ನಾಣಯ್ಯ, ನೆಲ್ಲಚಂಡ ಭೀಮಯ್ಯ, ಮೇಕೆರಿರ ಪಾಲಿ ಸುಬ್ರಮಣಿ, ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.