ಕುಶಾಲನಗರ: ಕೆಪಿಟಿಸಿಎಲ್ ನೌಕರರು ವಿದ್ಯುತ್ ನಿರ್ವಹಣೆ ವೇಳೆ ಇಲಾಖೆ ನೀಡಿದ ಸುರಕ್ಷತಾ ಸಲಕರಣೆಗಳನ್ನು ಬಳಕೆ ಮಾಡಿ ವಿದ್ಯುತ್ ಅವಘಡದಿಂದ ಪಾರಾಗಲು ಸಾಧ್ಯ ಎಂದು ಸೆಸ್ಕ್ ಮಡಿಕೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಸಲಹೆ ನೀಡಿದರು.

ಇಲ್ಲಿನ ಸೆಸ್ಕ್ವಿಭಾಗೀಯ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಸಂಘದ ಕುಶಾಲನಗರ ಪ್ರಾಥಮಿಕ ಸಮಿತಿ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೌಕರರು ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದರು.

ನೌಕರರು ಸಂಘಟಿತರಾಗುವ ಮೂಲಕ ನೂತನ ಸಂಘದ ಕಟ್ಟಡ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ. ನೂತನ ಕಚೇರಿಗೆ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡುವುದಾಗಿ ರಾಮಚಂದ್ರ ಭರವಸೆ ನೀಡಿದರು.

ಕಚೇರಿಯನ್ನು ಉದ್ಘಾಟಿಸಿದ ಗೋಣಿಕೊಪ್ಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಮಾತನಾಡಿ, ಕೊಡಗಿನಲ್ಲಿರುವ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಸೋಮವಾರಪೇಟೆ ವಿಭಾಗದ ವಿನಯ್ ಕುಮಾರ್, ಕುಶಾಲನಗರ ವಿಭಾಗದ ಮಂಜುನಾಥ್ ಹಾಗೂ ಸುರೇಶ್ ಮಾತನಾಡಿ, ಕೆಪಿಟಿಸಿಎಲ್ ನೌಕರರ ಸಂಘದ ಹಿತಕ್ಕಾಗಿ ಸಂಸ್ಥೆ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜ್ಯ ಸಂಘದ ಮುಖಂರಾದ ಸಂದೀಪ್, ಸತ್ಯನಾರಾಯಣ, ಶರಣಬಸಪ್ಪ,ಮಹೇಶ್ ,ಕೃಷ್ಣರಾಜು ಮಾತನಾಡಿದರು.
ಕುಶಾಲನಗರ ಸಮಿತಿ ಅಧ್ಯಕ್ಷ ಲವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನೌಕರರಾದ ಉಪೇಂದ್ರ,ದೇವರಾಜು,ಗೋವಿಂದರಾಜು ಅವರನ್ನು ಗೌರವಿಸಲಾಯಿತು.

ಮೈಸೂರು ಮುರಳಿಕೃಷ್ಣ, ಹಾಸನ ಸಂಘಟನಾ ಕಾರ್ಯದರ್ಶಿ ಪ್ರವೀಣ್ , ಮೈಸೂರು ವೆಂಕಟೇಶ,
ಮಡಿಕೇರಿ ಸಮಿತಿ ಅಧ್ಯಕ್ಷ ಶಿವಾನಂದ, ಮಹಾದೇವಯ್ಯ ಕೊಳ್ಳೇಗಾಲ, ರತ್ನಯ್ಯ ಮಡಿಕೇರಿ,ಗಣೇಶ್,ಪ್ರಕಾಶ್, ಸಹಾಯಕ ಲೆಕ್ಕಾಧಿಕಾರಿ ಪ್ರದೀಪ್ ಮುಖಂಡರಾದ ಸೋಮೇಶ್, ರಾಣಿ, ಹೇಮಂತ್, ತೀರ್ಥಕುಮಾರ್, ಗೌರಿ ಶಂಕರ್, ರಮೇಶ್ ಸುಂಟಿಕೊಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಬಿ.ಕೃಷ್ಷರಾಜು, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವಸಂತ ರೈ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.