ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಡಿಕೇರಿ | ‘ಅಮೃತ್‌’ ಅವಾಂತರ: ಹೂತು ಹೋಗುತ್ತಿವೆ ವಾಹನ ಚಕ್ರ

Published : 23 ಜೂನ್ 2025, 8:27 IST
Last Updated : 23 ಜೂನ್ 2025, 8:27 IST
ಫಾಲೋ ಮಾಡಿ
Comments
ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಮಡಿಕೇರಿಯ ಕನ್ನಂಡಬಾಣೆಯಲ್ಲಿ ವಾಹನಗಳ ಚಕ್ರಗಳು ಹೂತು ಹೋಗಿರುವುದು
ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಮಡಿಕೇರಿಯ ಕನ್ನಂಡಬಾಣೆಯಲ್ಲಿ ವಾಹನಗಳ ಚಕ್ರಗಳು ಹೂತು ಹೋಗಿರುವುದು
ಮಡಿಕೇರಿ ಟಿ.ಜಾನ್ ಲೇಔಟ್‌ನಲ್ಲಿ ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಹೂತು ಹೋಗುವ ಕಡೆ ಗಿಡಗಳನ್ನು ನೆಟ್ಟು ವಾಹನಗಳು ಅತ್ತ ಬಾರದಂತೆ ತಡೆದಿರುವುದು
ಮಡಿಕೇರಿ ಟಿ.ಜಾನ್ ಲೇಔಟ್‌ನಲ್ಲಿ ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಹೂತು ಹೋಗುವ ಕಡೆ ಗಿಡಗಳನ್ನು ನೆಟ್ಟು ವಾಹನಗಳು ಅತ್ತ ಬಾರದಂತೆ ತಡೆದಿರುವುದು
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಮೃತ್ –2 ಯೋಜನೆ ಮಡಿಕೇರಿಯಲ್ಲಿ ಅನುಷ್ಟಾನಗೊಂಡಿದೆ. ನೀರಿನ ಪೈಪ್ ಅಳವಡಿಕೆಗಾಗಿ ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿರುವ ಕುರಿತು ಮಡಿಕೇರಿ ನಗರಸಭೆ ವತಿಯಿಂದ 2 ಪತ್ರಗಳನ್ನು ಬರೆದಿದ್ದೇವೆ. ಗುಂಡಿ ತೆಗೆಯುವ ಮುಂಚೆ ಹೇಗಿತ್ತೋ ಹಾಗೆ ತರುವುದು ಅವರ ಜವಾಬ್ದಾರಿಯಾಗಿದೆ.
ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆ ಪೌರಾಯುಕ್ತ
ಅಮೃತ್–2 ಯೋಜನೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದೇ ಇರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುತ್ತಿವೆ. ಚಕ್ರವನ್ನು ಗುಂಡಿಯಿಂದ ಮೇಲೆತ್ತುವಷ್ಟರಲ್ಲಿ ವಾಹನಗಳ ಮಾಲೀಕರು ಹೈರಣಾಗುತ್ತಿದ್ದಾರೆ. ಇನ್ನು ನಡೆದಾಡುವ ಜನಸಾಮಾನ್ಯರ ಪಾಡಂತೂ ಹೇಳತೀರದಾಗಿದೆ. ಜನರಿಗೆ ಇದೇ ರೀತಿ ತೊಂದರೆ ಮುಂದುವರೆದರೆ ಜನರ ಪರವಾಗಿ ಪ್ರತಿಭಟನೆಯನ್ನೂ ಮಾಡಲು ಹಿಂಜರಿಯುವುದಿಲ್ಲ ಕೆ.ಎಸ್.ರಮೇಶ್‌ ಮಡಿಕೇರಿ ನಗರಸಭೆ ಸದಸ್ಯ

ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿ ಅದರ ಮೇಲೆ ವೆಟ್‌ಮಿಕ್ಸ್ ಹಾಗೂ ಕಾಂಕ್ರೀಟ್ ಹಾಕಬೇಕು ಎಂಬ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಜೊತೆಗೆ ಮಳೆ ಆರಂಭವಾಗಿರುವುದರಿಂದ ಮಳೆಗಾಲ ಮುಗಿಯುವವರೆಗೂ ಹೊಸದಾಗಿ ಗುಂಡಿಗಳನ್ನು ತೆಗೆಯಬಾರದು ಎಂಬ ನಿರ್ದೇಶನವನ್ನೂ ನೀಡಿದ್ದೇವೆ.
ಮಹೇಶ್ ಜೈನಿ ಮಡಿಕೇರಿ ನಗರಸಭೆ ಉಪಾಧ್ಯಕ್ಷ
ರಸ್ತೆ ಅಗೆದು ಪೈಪ್ ಹಾಕುವ ಕೆಲಸವನ್ನು ಬೇಗನೇ ಆರಂಭಿಸಿ ಮಳೆಗಾಲಕ್ಕೂ ಮುನ್ನವೇ ಸಮರೋಪಾದಿಯಲ್ಲಿ ಮುಗಿಸಬೇಕಿತ್ತು. ಆದರೆ ಬೇರೆ ನಗರಗಳಲ್ಲಿ ಮಾಡುವಂತೆ ಇಲ್ಲಿಯೂ ಮಾಡಲಾಗಿದೆ. ಈಗ ಮಳೆ ಸುರಿಯುತ್ತಿರುವುದರಿಂದ ಎಲ್ಲೆಂದರಲ್ಲಿ ವಾಹನಗಳ ಚಕ್ರಗಳು ಹೂತು ಹೋಗುತ್ತಿವೆ. ದೇಚೂರಿನಲ್ಲಿ ಈಚೆಗೆ ಕಾರಿನ ಚಕ್ರ ಹೂತು ಹೋಗಿ ಮಾಲೀಕರು ಬಹಳ ಪರದಾಡಿದರು. ಆಟೊ ಚಾಲಕರಿಗೂ ಇಂತಹ ಗುಂಡಿಗಳಿಂದ ಸಮಸ್ಯೆಯಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಮಡಿಕೇರಿ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆಯನ್ನೂ ನಡೆಸಲಾಗುವುದು
ಡಿ.ಎಚ್‌.ಮೇದಪ್ಪ ಕೊಡಗು ಜಿಲ್ಲಾ ಆಟೊ ಚಾಲಕರ ಸಂಘದ ಅಧ್ಯಕ್ಷ
ಸ್ತೆಬದಿ ಗುಂಡಿಗಳನ್ನು ಅಗೆದು ಸಾಕಷ್ಟು ಕಾಲವಾಯಿತು. ಆದರೂ ಇನ್ನೂ ಸಮರ್ಪಕವಾಗಿ ಮುಚ್ಚಿಲ್ಲ. ಮಳೆಯಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುವುದು ಸಾಮಾನ್ಯ ಎನಿಸಿದೆ. ದಯವಿಟ್ಟು ರಸ್ತೆ ಬದಿ ಮೊದಲು ಹೇಗಿತ್ತೋ ಆ ಸ್ಥಿತಿಗೆ ತನ್ನಿ. ಕನಿಷ್ಠ ವಾಹನಗಳ ಚಕ್ರಗಳು ಹೂತು ಹೋಗದ ಹಾಗೆ ಮಾಡಿ.
ಎಂ.ಎ.ಇರ್ಷದ್ ಕಾವೇರಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯ‌ಕ್ಷ
ಮಡಿಕೇರಿಯ ಚಾಮುಂಡೇಶ್ವರಿ ನಗರ ಇಂದಿರಾನಗರ ದೇಚೂರು ಪುಟಾಣಿ ನಗರ ಸೇರಿದಂತೆ ಕೆಲವೆಡೆ ಗುಂಡಿಗಳನ್ನು ಮುಚ್ಚಿ ವೆಟ್‌ಮಿಕ್ಸ್ ಹಾಕಿದ್ದೇವೆ. ಇನ್ನೂ ಕೆಲವೆಡೆ ಬಾಕಿ ಉಳಿದಿದೆ. ಪೈಪ್‌ನಲ್ಲಿ ನೀರು ಬಿಟ್ಟು ಪರೀಕ್ಷಿಸಿದ ನಂತರ ಕಾಂಕ್ರೀಟ್ ಇಲ್ಲವೇ ಡಾಂಬರು ಹಾಕುತ್ತೇವೆ.
ಬಿಪಿನ್‌ಚಂದ್ರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT