ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ನಾಡಿನಲ್ಲಿ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆಗೆ ಮಂಜಿನ ನಗರಿ ಸಿದ್ಧಗೊಳ್ಳುತ್ತಿದೆ.

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಗರದಲ್ಲಿ ಅ.2ರಂದು ರಾತ್ರಿಯಿಂದ ಮರುದಿನ ಬೆಳಿಗ್ಗೆಯವರೆಗೂ ಹತ್ತು ಮಂಟಪಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದಕ್ಕಾಗಿ ಮಂಟಪಗಳ ತಯಾರಿ ಕೆಲಸ ಭರದಿಂದ ಸಾಗಿದೆ.

ನಿತ್ಯವೂ ಬೀಳುತ್ತಿರುವ ಮಳೆ ನಿಜಕ್ಕೂ ಮೆರವಣಿಗೆಗೆ ಭಾರಿ ಸವಾಲೊಡ್ಡಿದೆ. ಮಳೆ ಬಿಡುವು ನೀಡಲಿ ಎಂಬುದೇ ಎಲ್ಲರ ಹರಕೆಯಾಗಿದೆ.

ಸುಮಾರು 150 ವರ್ಷಗಳಿಗೂ ಹಿಂದೆ ಭೀಮ್ಸಿಂಗ್ ಎಂಬುವವರಿಂದ ಆರಂಭವಾದ ಈ ಮಂಟಪಗಳ ಮೆರವಣಿಗೆಯು ಅನೂಚಾನವಾಗಿ ಸಾಗಿ ಬರುತ್ತಿದೆ. ಇಂದು ಒಟ್ಟು 10 ದೇಗುಲಗಳ ಮಂಟಪ ಸಮಿತಿಯವರು ವೈವಿಧ್ಯಮಯವಾದ ಮಂಟಪಗಳನ್ನು ತಯಾರಿಸುತ್ತಿದ್ದಾರೆ. ಈ ಮಂಟಪಗಳಲ್ಲಿ ಪೌರಾಣಿಕ ಕಥಾವಸ್ತುವೊಂದನ್ನು ಕಲಾಕೃತಿಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಇಲ್ಲಿನ ಕಲಾಕೃತಿಗಳು ಚಲನವಲನಗಳಿಂದ ಕೂಡಿರುವುದು ವಿಶೇಷ ಎನಿಸಿದೆ. ರಾಜ್ಯದ ಬೇರೆಲ್ಲೂ ಭಾಗದಲ್ಲೂ ಕಾಣಲು ಸಿಗದಂತಹ ಅಪೂರ್ವ ದೃಶ್ಯಾವಳಿಗಳಿಗೆ ಮಡಿಕೇರಿ ಸಾಕ್ಷಿಯಾಗಲಿದೆ.

ವಿಜಯದಶಮಿಯ ರಾತ್ರಿ ಮೊದಲಿಗೆ ಹೊರಡುವುದು ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮಮಂದಿರದ ಮಂಟಪ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾವಸ್ತುವನ್ನು ಪ್ರದರ್ಶಿಸುತ್ತಾ ವೈಭವೋಪೇತ ಮೆರವಣಿಗೆಗೆ ಚಾಲನೆ ನೀಡಲಿದೆ. ಈ ಮಂಪಟ ಸುಮಾರು 150ಕ್ಕೂ ಅಧಿಕ ವರ್ಷಗಳಿಂದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ.

ಇದರ ಬೆನ್ನಲ್ಲೆ ಹೊರಡುವ ದೇಚೂರು ಶ್ರೀರಾಮಮಂದಿರವು ಈ ಬಾರಿ 107ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಬಾರಿ ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶಿಸುತ್ತಾ ಸಾಗಲಿದೆ.

ನಂತರ ಹೊರಡುವ ದಂಡಿನ ಮಾರಿಯಮ್ಮ ಮಂಟಪ ಸಮಿತಿಯು 95ನೇ ಬಾರಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು, ‘ಶಿವನಿಂದ ಅಂಧಾಸುರನ ವಧೆ’ ಕಥಾವಸ್ತುವನ್ನು ಪ್ರದರ್ಶಿಸಲಿದೆ. ನಂತರ, ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ತನ್ನ 63ನೇ ಮಂಟಪೋತ್ಸವದಲ್ಲಿ ‘ಆನಂದ ರಾಮಾಯಣ’ ಕಥಾವಸ್ತುವನ್ನು ಪ್ರದರ್ಶಿಸಲಿದೆ.

ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯ ತನ್ನ 62ನೇ ವರ್ಷದ ಮಂಟಪೋತ್ಸವದಲ್ಲಿ ‘ಪರಶುರಾಮನಿಂದ ಕಾರ್ತಿವೀರ ಅರ್ಜುನನ ಕಾಳಗ ಅನಾವರಣ’ ಎಂಬ ಕಥಾವಸ್ತುವನ್ನು, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಮಂಟಪ ಸಮಿತಿಯು ತನ್ನ 52ನೇ ವರ್ಷದ ಮಂಟಪೋತ್ಸವದಲ್ಲಿ ‘ಶಿವಪುರಾಣದ ಆಯ್ದ ಕಥಾ ಭಾಗ ಪರಶಿವನಿಂದ ಜಲಂಧರನ ವಧೆ’ ಪ್ರಸಂಗವನ್ನು, ತನ್ನ 51ನೇ ವರ್ಷದ ಮಂಟಪೋಪತ್ಸವದಲ್ಲಿ ಕೋದಂಡರಾಮ ದೇವಾಲಯ ಸಮಿತಿಯು ‘ಶ್ರೀ ಕ್ಷೇತ್ರ ಅದಿಚುಂಚನಗಿರಿ ಕಾಲ ಭೈರವ ಮಹಾತ್ಮೆ’ಯನ್ನು, ತನ್ನ 50ನೇ ವರ್ಷದ ಪ್ರದರ್ಶನದಲ್ಲಿ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ‘ಶರಭವತಾರ ಮತ್ತು ಪ್ರತ್ಯಂಗಿರಾ ದೇವಿಯಿಂದ ಉಗ್ರ ನರಸಿಂಹನ ಉಗ್ರಾವತಾರ ಶಮನ’ ಎಂಬ ಕಥಾಹಂದರವನ್ನು, ತನ್ನ 49ನೇ ವರ್ಷ ಮಂಟಪೋತ್ಸವದಲ್ಲಿ ಕೋಟೆ ಗಣಪತಿ ಸಮಿತಿಯು ‘ವಿಘ್ನರಾಜನಿಂದ ಮಮತಾಸುರನ ಸಂಹಾರ’ ಕಥಾವಸ್ತುವನ್ನು, ತನ್ನ 30ನೇ ವರ್ಷದಲ್ಲಿ ಕರವಲೆ ಭಗವತಿ ಮಂಟಪ ಸಮಿತಿಯು ಆಂಜನೇಯನಿಂದ ದ್ರೋಣಗಿರಿಯನ್ನು ಹೊತ್ತು ತರುವ ಕಥಾ ಸಾರಾಂಶವನ್ನು ಪ್ರದರ್ಶಿಸಲು ಸಿದ್ಧಗೊಳ್ಳುತ್ತಿದ್ದಾರೆ.

ಮದ್ಯ ಮಾರಾಟ ನಿಷೇಧ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಸರಾ ಮತ್ತು ಆಯುಧಪೂಜೆ ಹಿನ್ನೆಲೆಯಲ್ಲಿ ಅ. 1ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸುಂಟಿಕೊಪ್ಪ ಕೊಡಗರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅ.3 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ ಬಾರ್ ಹೋಟೆಲ್ ಮತ್ತು ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್‘ಬೆಳಕಿನ ದಸರೆ’ ಎಂದೇ ನಾಡಿನಲ್ಲಿ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆಗೆ ಮಂಜಿನ ನಗರಿ ಸಿದ್ಧಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.