ಮಡಿಕೇರಿ: ಕಳೆದೆಲ್ಲ ವರ್ಷಗಳಿಗಿಂತಲೂ ಈ ವರ್ಷ ದಸರಾ ದಶಮಂಟಪಗಳ ಶೋಭಾಯಾತ್ರೆ ಅಧಿಕಾರಿಗಳು, ಪೊಲೀಸರ ಪಾಲಿಗೆ ತುಸು ಕಗ್ಗಂಟಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣ ನಡೆದ ನಂತರ ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ)ವನ್ನು ಸರ್ಕಾರ ಜೂನ್ 26ರಂದು ಹೊರಡಿಸಿದೆ. ಇದನ್ನು ಕಾರ್ಯರೂಪಕ್ಕೆ ತರುವುದು ಈಗ ಪೊಲೀಸರ ಹೆಗಲಿಗೇರಿದೆ.

ಈಗಾಗಲೇ ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಅಮಾನತಿನಂತಹ ಅಸ್ತ್ರ ಪ್ರಯೋಗಿಸಿರುವುದು ಸಹ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಕಾಡುವಂತೆ ಮಾಡಿದೆ. ಹಾಗಾಗಿ, ದಸರೆಗೆ ಸಾಕಷ್ಟು ಮುಂಚಿತವಾಗಿಯೇ ಈ ‘ಎಸ್ಒಪಿ’ ಪ್ರಕಾರವೇ ಶೋಭಾಯಾತ್ರೆ ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ.

ಈಚೆಗೆ ನಡೆದ ಸಭೆಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಸರಾ ದಶಮಂಟಪಗಳ ಸಮಿತಿಯ ಸದಸ್ಯರು ಹಾಗೂ ಪೊಲೀಸರು ಹೆಚ್ಚು ಚರ್ಚೆ ನಡೆಸಿದರು. ಸಾರಿಗೆ ಅಧಿಕಾರಿಗಳಿಂದ ಮಂಟಪ ಕೊಂಡೊಯ್ಯುವ ವಾಹನಗಳಿಗೆ ಪರವಾನಗಿ ತರುವುದು ಕಡ್ಡಾಯ ಎಂಬ ಪೊಲೀಸರ ಮಾತಿಗೆ ಸಮಿತಿಯ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹೆಚ್ಚು ನಿರ್ಬಂಧಗಳನ್ನು ಹೇರದಿರಿ ಎಂದು ಮನವಿಯನ್ನೂ ಮಾಡಿದರು.

ಶಾಸಕ ಡಾ.ಮಂತರ್ಗೌಡ ಸಹ ಸ್ವಯಂನಿಯಂತ್ರಣ ಹಾಕಿಕೊಂಡು ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಪೊಲೀಸರು ಹೆಚ್ಚು ನಿರ್ಬಂಧ ವಿಧಿಸದಂತೆ ಸಲಹೆ ನೀಡಿದರು.

ಏನಿದು ‘ಎಸ್ಒಪಿ’:

ಹಬ್ಬಗಳು, ರ್ಯಾಲಿಗಳು, ಕ್ರೀಡಾ ಆಚರಣೆಗಳಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣ ಕುರಿತಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ)ವನ್ನು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಾರ್ಯಾಲಯ ಜೂನ್ 26ರಂದು ಆದೇಶ ಹೊರಡಿಸಿದೆ. ಒಟ್ಟು 5 ಪುಟಗಳ ಈ ಪತ್ರದಲ್ಲಿ ಹೆಚ್ಚು ಜನಸಂದಣಿ ಸೇರುವ ಪ್ರದೇಶದಲ್ಲಿ ಅನುಸರಿಸಬೇಕಾದ ನಿಯಮಗಳನ್ನು, ಕಾನೂನುಗಳನ್ನು ಪ್ರಸ್ತಾಪಿಸಲಾಗಿದೆ.

ಇದರಲ್ಲಿ ವೇದಿಕೆಗಳ ಸುರಕ್ಷತಾ ತಪಾಸಣೆಯ ಅಂಶವೂ ಸಹ ಸೇರಿದೆ. ‘ವೇದಿಕೆಗಳ ಸಾಮರ್ಥ್ಯಗಳ ಮಿತಿ, ಪ್ರವೇಶ, ನಿರ್ಗಮನ ಮಾರ್ಗಗಳು, ತುರ್ತು ನಿರ್ಗಮನ ಯೋಜನೆಗಳು ಮತ್ತು ಸಂಪರ್ಕ ವ್ಯವಸ್ಥೆಗಳೊಂದಿಗೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು. ತಪಾಸಣೆಯಲ್ಲಿ ವಿಫಲವಾದ ಸ್ಥಳಗಳಿಗೆ ಹೆಚ್ಚಿನ ಜನಸಂದಣಿಯ ಕಾರ್ಯಕ್ರಮಗಳಿಗೆ ಅನುಮತಿ ನೀಡಲೇಬಾರದು ಎಂದು ‘ಎಸ್ಒಪಿ’ಯಲ್ಲಿ ಖಡಕ್ಕಾಗಿ ಹೇಳಲಾಗಿದೆ. ಹಾಗಾಗಿಯೇ, ಈಗ ಪೊಲೀಸರು ಪ್ರತಿ ಮಂಟಪಗಳ ಕುರಿತು ಸಾರಿಗೆ ನಿಯಂತ್ರಣ ಅಧಿಕಾರಿಗಳಿಂದ ಪರವಾನಗಿ ಪತ್ರ ತರಬೇಕು ಎಂದು ಹೇಳುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಈ ಹಿಂದೆ ಮಂಟಪವೊಂದು ಮೆರವಣಿಗೆಯ ವೇಳೆ ಏಕಾಏಕಿ ಉರುಳಿ ಬಿದ್ದಿತ್ತು. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಲಿಲ್ಲ. ಆ ನಂತರವೂ ಮಂಟಪಗಳ ರಚನೆಯಲ್ಲಿ ಯಾವುದೇ ಬಗೆಯ ಸುಧಾರಣೆ ಕಂಡು ಬರಲಿಲ್ಲ. ಇದು ಸಹ ಪೊಲೀಸರ ಕಠಿಣ ಸೂಚನೆಗೆ ಕಾರಣ ಎನಿಸಿದೆ.

ಜನಸಂದಣಿ ನಿಯಂತ್ರಿಸಿ: ದಸರಾ ದಶಮಂಟಪಗಳ ಸಮಿತಿಯವರು ಮಂಟಪಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಬದಲಾಗಿ ಜನಸಂದಣಿ ನಿಯಂತ್ರಿಸಲು ಪೊಲೀಸರು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾರೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಸಾಕಷ್ಟು ಆನೆಗಳನ್ನು ಬಳಕೆ ಮಾಡಲಾಗುತ್ತಿದೆ. ಮಾತ್ರವಲ್ಲ, ಹಲವು ಸ್ತಬ್ದಚಿತ್ರಗಳು, ಕಲಾತಂಡಗಳು ಇರುತ್ತವೆ. ಅವುಗಳನ್ನು ನೋಡಲು ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ, ಅಲ್ಲಿನ ಪೊಲೀಸರು ಎಲ್ಲವನ್ನೂ ಹೆಚ್ಚು ಯೋಜಿತ ರೀತಿಯಲ್ಲಿ ಮಾಡುತ್ತಾರೆ. ಸ್ತಬ್ದಚಿತ್ರಗಳು, ಆನೆಗಳ ಸಮೀಪ ಜನರನ್ನು ಬಿಡುವುದೇ ಇಲ್ಲ. ಇಲ್ಲೂ ಇದೇ ರೀತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕು. ಆಗ ಯಾವುದೇ ದುರಂತಗಳು ಸಂಭವಿಸುವುದಿಲ್ಲ. ಈಗ ಇರುವ ಪೊಲೀಸರಿಗಿಂತ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕು ಎಂದು ಅವರು ಹೇಳುತ್ತಾರೆ.

ಒಂದು ವೇಳೆ ದುರಂತ ಸಂಭವಿಸಿದರೆ ಅದಕ್ಕೆ ಪೊಲೀಸರು, ಅಧಿಕಾರಿಗಳು ಮಾತ್ರವಲ್ಲ ಆಯೋಜಕರೂ ಹೊಣೆಗಾರರು ಎಂಬುದನ್ನು ಮರೆಯಬಾರದು ಎಂದು ಪೊಲೀಸರು ಹೇಳುತ್ತಾರೆ.

‘ಬದಲಾವಣೆಗೆ ಕಾಲಾವಕಾಶ ಇಲ್ಲ’

ಕಳೆದ 6 ತಿಂಗಳ ಹಿಂದಿನಿಂದಲೇ ದಸರಾ ದಶಮಂಟಪಗಳ ರಚನಾ ಕಾರ್ಯ ಆರಂಭವಾಗಿದೆ. ಸಿದ್ಧತೆಗಳೆಲ್ಲವೂ ನಡೆದಿವೆ. ಈಗ ಅವುಗಳ ಬದಲಾವಣೆಗೆ ನಮಗೆ ಕಾಲವಕಾಶ ಇಲ್ಲ. ಈಗ ಹೊಸದಾಗಿ ‘ಆರ್ಟಿಒ’ದಿಂದ ಅನುಮತಿ ಬೇಕು ಎಂದರೆ ಹೇಗೆ? ನಾವು ಸಹ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಹೇಗಿತ್ತೋ ಹಾಗೆಯೇ ಶೋಭಾಯಾತ್ರೆ ಮಾಡಲು ಬಿಡಬೇಕು

- ಬಿ.ಎಂ.ಹರೀಶ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ.

‘ಹೊಸ ನಿಯಮ ಇಲ್ಲ, ಇರುವ ನಿಯಮ ಪಾಲಿಸಿ’

ನಾವೇನೂ ಈ ಬಾರಿ ಹೊಸ ನಿಯಮಗಳನ್ನು ಹೇರುತ್ತಿಲ್ಲ. ಸರ್ಕಾರ ಮಾಡಿರುವ ಎಸ್ಒಪಿ ಸಹ ಹೊಸದೇನೂ ಅಲ್ಲ. ಈಗಾಗಲೇ ಇರುವ ನಿಯಮ ಹಾಗೂ ಕಾನೂನುಗಳಡಿಯಲ್ಲೇ ಎಸ್ಇಪಿಯನ್ನು ಸರ್ಕಾರ ಮಾಡಿದೆ. ನಾವೂ ಸಹ ಜನರ ಸುರಕ್ಷತೆಗಾಗಿ ಈಗಾಗಲೇ ಇರುವ ನಿಯಮಗಳನ್ನು ಪಾಲಿಸಿರಿ ಎಂದು ಹೇಳುತ್ತಿದ್ದೇವೆ.

- ಬಿ.ಪಿ.ದಿನೇಶ್ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು.

‘ವೈಭವಕ್ಕೆ ಧಕ್ಕೆ ತರಲಾಗುತ್ತಿದೆ’

ಮಡಿಕೇರಿ ದಸರೆಯ ದಶಮಂಟಪಗಳಲ್ಲಿ ಪೌರಾಣಿಕ ಪಾತ್ರಗಳೇ ಭೂಮಿಗೆ ಇಳಿದು ಬಂದಂತೆ ವೈಭವಯುತವಾಗಿ ಶೋಭಾಯಾತ್ರೆ ನಡೆಯುತ್ತದೆ. ಹೆಚ್ಚಿನ ನಿರ್ಬಂಧಗಳನ್ನು ಹೇರುವ ಮೂಲಕ ಈ ವೈಭವಕ್ಕೆ ಧಕ್ಕೆ ತರಲಾಗುತ್ತಿದೆ. ಟ್ರಾಕ್ಟರ್ಗಳನ್ನು ಮಾರ್ಪಾಡು ಮಾಡುವ ಮೂಲಕವೇ ಮಂಟಪ ರೂಪಿಸಬೇಕಾಗುತ್ತದೆ. ಈ ಮಾರ್ಪಾಡಿಗೆ ಆರ್ಟಿಒ ಅನುಮತಿ ಪಡೆಯಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಜನಸಂದಣಿಯನ್ನು ಮೊದಲು ಪೊಲೀಸರು ನಿಯತ್ರಿಸಬೇಕು

- ಮಹೇಶ್ ಜೈನಿ, ದಸರಾ ಸಮಿತಿ ಉಪಾಧ್ಯಕ್ಷ.

ಜನಸಂದಣಿ ನಿಯಂತ್ರಿಸಿ

ವರ್ಷಕ್ಕೊಂದು ಕಾನೂನು ತರಲಾಗುತ್ತಿದೆ. ಒಂದು ಸಮಯದಲ್ಲಿ 6–7 ಟ್ರಾಕ್ಟರ್ಗಳನ್ನು ಜೋಡಿಸಿ ಮಂಟಪ ಮಾಡಲಾಗುತ್ತಿತ್ತು. ಆದರೆ, ಈಗ ಅದನ್ನು 2 ಟ್ರಾಕ್ಟರ್ಗೆ ಇಳಿಕೆ ಮಾಡಿದ್ದೇವೆ. ಈಗ ನಿಯಮಗಳನ್ನು ಹೇಳುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಈ ಬಾರಿ ಬ್ಯಾಂಡ್ಸೆಟ್ ತರಲು ನಿರ್ಧರಿಸಿದ್ದೇವೆ. ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಬೇಕು

- ಬಿ.ಕೆ.ಅರುಣ್ಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.