ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಸ್ಥಾಯಿ ಸಮಿತಿಯಲ್ಲಿ ಮಹಿಳೆಯರೇ ಮೇಲುಗೈ

ಜಿ.ಪಂ ಸಭಾಂಗಣದಲ್ಲಿ ನೂತನ ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ
Last Updated 17 ಮಾರ್ಚ್ 2020, 14:52 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಪಂಚಾಯತ್ 3ನೇ ಹಾಗೂ ಕೊನೆಯ ಅವಧಿಗೆ ಮಂಗಳವಾರ ನಡೆದ 3 ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೂವರು ಮಹಿಳೆಯರೇ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ನಗರದ ಜಿ.ಪಂ.ನೂತನ ಸಭಾಂಗಣದಲ್ಲಿ ನಡೆದ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಭಾಗಮಂಡಲ ಕ್ಷೇತ್ರದ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಬಿಟ್ಟಂಗಾಲ ಕ್ಷೇತ್ರದ ಅಪ್ಪಂಡೇರಂಡ ಭವ್ಯ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೂಡಿಗೆ ಕ್ಷೇತ್ರದ ಕೆ.ಆರ್ ಮಂಜುಳಾ ಅವರು ಆಯ್ಕೆಯಾಗಿದ್ದಾರೆ.

ಇನ್ನು ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್‌ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಎನ್.ಟಿ. ಕಿರಣ್ ಕಾರ್ಯಪ್ಪ, ಶ್ರೀನಿವಾಸ್, ಬಿ.ಜೆ. ದೀಪಕ್ , ಬಿ.ಪಿ. ಕಲಾವತಿ ಯಾಲದಾಳು ಪದ್ಮಾವತಿ ಮತ್ತು ಶ್ರೀಜ ಸಾಜಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ.ಉಪಾಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಮೂಕೊಂಡ ವಿಜು ಸುಬ್ರಮಣಿ, ಸಿ.ಕೆ.ಬೋಪಣ್ಣ, ಎ.ಬಿ.ಸುನಿತಾ, ಕೆ.ಕೆ.ಕುಮಾರ್, ಎಂ.ಬಿ.ಮಾದಪ್ಪ ಮತ್ತು ಕೆ.ಪಿ.ಚಂದ್ರಕಲಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾಗಿ ಸಿ.ಕೆ.ಬೋಪಣ್ಣ, ಬಿ.ಜೆ.ದೀಪಕ್, ಸರೋಜಮ್ಮ, ಮುರುಳಿ ಕರುಂಬಮ್ಮಯ್ಯ, ಲೀಲಾವತಿ ಮತ್ತು ಬಾನಂಡ ಎನ್.ಪ್ರತ್ಯು ಅವರು ಆಯ್ಕೆಯಾಗಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾಗಿ ಮೂಕೊಂಡ ಪಿ.ಸುಬ್ರಮಣಿ(ಶಶಿ), ಪೂರ್ಣಿಮ ಗೋಪಾಲ್, ಎನ್.ಟಿ.ಕಿರಣ್ ಕಾರ್ಯಪ್ಪ, ಪಿ.ಆರ್.ಪಂಕಜ, ಲತೀಫ್ ಮತ್ತು ಕುಮುದ ಧರ್ಮಪ್ಪ ಆಯ್ಕೆಯಾಗಿದ್ದಾರೆ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಮೂಕೊಂಡ ವಿಜು ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಮುರುಳಿ ಕರುಂಬಮ್ಮಯ್ಯ, ಸರೋಜಮ್ಮ, ಸಿ.ಪಿ.ಪುಟ್ಟರಾಜು ಮತ್ತು ಕೆ.ಪಿ.ಸರಿತಾ ಪೂಣಚ್ಚ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT