ಮಂಗಳವಾರ, ಆಗಸ್ಟ್ 3, 2021
20 °C

ಬೀಟೆ ನಾಟಾ ಸಂಗ್ರಹ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸಮೀಪದ ಕೂಗೂರು ಗ್ರಾಮದಲ್ಲಿ ಬೀಟೆ ಮರವನ್ನು ಅಕ್ರಮವಾಗಿ ಕಡಿದು ನಾಟಾವನ್ನು ದಾಸ್ತಾನಿರಿಸಿದ್ದ ಆರೋಪದಡಿ ಆರೋಪಿಯನ್ನು ಶನಿವಾರಸಂತೆ ವಲಯ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಚಿಕ್ಕಾರ ಗ್ರಾಮದ ಜಿ.ಎಂ.ರಘು ಬಂಧಿತ ಆರೋಪಿ.

ಕೂಗೂರು ಗ್ರಾಮದ ಕಾಫಿ ತೋಟದಲ್ಲಿ ಬೀಟೆ ಮರ ಕಡಿದು ನಾಟಾ ಮಾಡಿ ದಾಸ್ತಾನು ಮಾಡಲಾಗಿತ್ತು. ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ರಘುನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ತೋಟದ ಮಾಲೀಕ ಕೆ.ಎ.ಸೋಮೇಶೇಖರ್ ಅವರ ಪತ್ತೆಗೆ ಕ್ರಮ ಕೈಗೊಂಡಿದೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಹಾಗೂ ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಸೂರ್ಯ, ಅರಣ್ಯ ರಕ್ಷಕ ರಾಮಕೃಷ್ಣ ಶೆಟ್ಟಿ, ವೀಕ್ಷಕ ನಾಗರಾಜ್, ಆರ್.ಆರ್.ಟಿ. ಸಿಬ್ಬಂದಿ ದೇವಿಕಾಂತ್, ಯಜ್ಞಪ್ರಸಾದ್, ಕಿಶೋರ್, ಹರ್ಷಿತ್, ಯತೀಶ್ ಮತ್ತು ಭರತ್ ಪಾಲ್ಗೊಂಡಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು