ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯು ಸಹಜವಾದುದ್ದಲ್ಲ. ಅದರಲ್ಲೂ ಇಷ್ಟೊಂದು ಪ್ರಮಾಣದ ಮಳೆ ಮೇ ತಿಂಗಳಿನಲ್ಲಿ ಈ ಹಿಂದೆ ಸುರಿದಿರಲಿಲ್ಲ. ಬೇಸಿಗೆಯ ಸಂದರ್ಭದಲ್ಲಿ ಮಳೆಗಾಲದಂತೆ ಸುರಿದ ಮಳೆಯಿಂದ ಕಾಫಿಗೆ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕ ಕೆಲವರಲ್ಲಿದೆ.

ಸಹಜವಾಗಿ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿರಬೇಕಿತ್ತು. ಮಳೆ ಬಿದ್ದರೂ ಮುಂಗಾರಿನಂತೆ ಬೀಳುತ್ತಿರಲಿಲ್ಲ. ಆದರೆ, ಈ ಬಾರಿ ಮುಂಗಾರು ಮುಂಚಿತವಾಗಿ ಆರಂಭವಾಗಿ ಒಂದೇ ವಾರದಲ್ಲೇ ಹಲವು ಪಟ್ಟು ಹೆಚ್ಚು ಮಳೆ ಸುರಿಯಿತು.

ಈ ಕುರಿತು ‘ಪ್ರಜಾವಾಣಿ’ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ ಅವರು, ‘ಈ ಮಳೆಯಿಂದ ಕಾಫಿಯ ಮೇಲೆ ಯಾವುದೇ ನಕರಾತ್ಮಕ ಪರಿಣಾಮ ಉಂಟಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಒಂದು ವಾರದ ನಂತರ ಮಳೆ ಬಿಡುವು ನೀಡಿದೆ. ಈಗ ಕಾಫಿ ತೋಟಗಳಿಗೆ ಕಾಫಿ ಮಂಡಳಿ ಶಿಫಾರಸ್ಸು ಮಾಡಿದಷ್ಟು ಗೊಬ್ಬರ ಹಾಕಬಹುದು. ನಂತರ, ಮಳೆ ಬಂದಲ್ಲಿ ಕಾಫಿ ಉತ್ಪಾದನೆ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಅವರು ಹೇಳುತ್ತಾರೆ.

ಮಳೆ ಸ್ವಲ್ಪ ಹೆಚ್ಚಿಗೆ ಬಿದ್ದರೂ ಈಗ ಬಹುತೇಕ ಕಡೆ ಬಿಡುವು ನೀಡಿರುವುದರಿಂದ ತೊಂದರೆಯಾಗುವುದಿಲ್ಲ. ಬೆಳೆಗಾರರು ತಡಮಾಡದೇ ಈ ಬಿಡುವಿನ ಅವಧಿಯಲ್ಲಿ ಗೊಬ್ಬರ ಹಾಕಬೇಕು. ಮತ್ತೆ ಕೆಲವು ದಿನಗಳ ನಂತರ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಗೊಬ್ಬರ ಹಾಕುವುದಕ್ಕೆ ಇದು ಸಕಾಲ ಎಂದು ಅವರು ತಿಳಿಸುತ್ತಾರೆ.

ಹಲವು ಬೆಳೆಗಾರರು ಗೊಬ್ಬರ ಹಾಕಿರಲಿಲ್ಲ. ಇಷ್ಟೊಂದು ಪ್ರಮಾಣದ ಮಳೆ ಬರುತ್ತದೆ ಎಂಬ ಯಾವ ಸೂಚನೆಯನ್ನೂ ಅರಿಯದೇ ತೋಟವನ್ನು ಮಳೆಗಾಗಿ ಸಿದ್ಧಗೊಳಿಸಿರಲಿಲ್ಲ. ಹಾಗಾಗಿ, ಈ ಮಳೆಯಿಂದ ಯಾವುದೇ ಪ್ರಯೋಜನವಾಗದು ಎಂದು ಕೆಲವು ಬೆಳೆಗಾರರು ಹೇಳುತ್ತಾರೆ.

ಆದರೆ, ಇದನ್ನು ನಿರಾಕರಿಸುವ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್, ‘ಉತ್ತಮವಾಗಿ ತೋಟಗಳನ್ನು ನಿರ್ವಹಣೆ ಮಾಡಿರುವವರಿಗೆ ಯಾವುದೇ ತೊಂದರೆ ಇಲ್ಲ. ಈಗಲೂ ಕಾಲ ಮಿಂಚಿಲ್ಲ. ಮಳೆ ಬಿಡುವು ನೀಡಿರುವಾಗ ಗೊಬ್ಬರ ಹಾಕಿ, ಹದ ಮಾಡಿಕೊಳ್ಳಿ. ಮುಂದೆ ಮಳೆಯಾಗುವುದರಿಂದ ಕಾಫಿ ಇಳುವರಿಗೆ ಸಹಕಾರಿಯಾಗಲಿದೆ’ ಎಂದು ಸಲಹೆ ನೀಡುತ್ತಾರೆ.

ಕಳೆದ ಎರಡು ವರ್ಷಗಳ ಹಿಂದೆ ಮೇ ತಿಂಗಳಿನಲ್ಲಿ ವಿಪರೀತ ಉಷ್ಣಾಂಶ ದಾಖಲಾಗಿತ್ತು. ಇಂತಹ ಅಸಾಮಾನ್ಯ ಉಷ್ಣಾಂಶ ಏರಿಕೆಗಿಂತ ಈ ಮಳೆ ಪರವಾಗಿಲ್ಲ ಎಂಬ ಅಭಿಪ್ರಾಯವೂ ಬೆಳೆಗಾರರಲ್ಲಿದೆ.

ಮಳೆ ಮುಂದುವರಿಯದೇ ಸ್ವಲ್ಪ ಬಿಡುವು ನೀಡಿರುವುದು ಕೊಳೆ ರೋಗದ ಸಾಧ್ಯತೆಯನ್ನು ಕಡಿಮೆಯಾಗಿಸಿದೆ. ಈಗ ಒಂದಿಷ್ಟು ದಿನ ಬಿಸಿಲು ಬಂದರೆ, ನಂತರ ಮಳೆಯಾದರೆ ನಿಜಕ್ಕೂ ಕಾಫಿ ತೋಟಗಳಿಗೆ ಅನುಕೂಲವಾಗುತ್ತದೆ.

ಈಗ ಸುರಿದಿರುವ ಮಳೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಸದ್ಯ ಮಳೆ ಬಿಡುವು ನೀಡಿರುವುದರಿಂದ ಕಾಫಿ ಮಂಡಳಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು
–ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

ಮುಂದಿನ ಮಳೆಗೆ ಎಚ್ಚರಿಕೆ ವಹಿಸಿ

ಈಗ ಸದ್ಯ ಸುರಿದಿರುವ ಮಳೆಯಿಂದ ಸಮಸ್ಯೆ ಇಲ್ಲ ಎಂದು ತಜ್ಞರು ಹೇಳಿದರೂ ಮುಂಬರುವ ದಿನಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂನ್ನಲ್ಲಿ ವಾಡಿಕೆ ಮಳೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿಯೇ ಹೇಳಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಸುರಿಯಲಿರುವ ಮಳೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ನೀರು ಬಸಿದು ಹೋಗಲು ವ್ಯವಸ್ಥೆ ಮಾಡಬೇಕು ಹಾಗೂ ನೆರಳಿನ ನಿರ್ವಹಣೆ ಮಾಡಬೇಕು. ಮೈಸೂರಿನ ನಾಗನಹಳ್ಳಿಯಲ್ಲಿರುವ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗವು ಕೆಲವೊಂದು ಸಲಹೆಗಳನ್ನು ನೀಡಿದೆ. ಪ್ರತಿದಿನ ಮಳೆಯಾಗುವ ನಿರೀಕ್ಷೆಯಿದೆ; ನೀರು ನಿಲ್ಲುವುದನ್ನು ಮತ್ತು ಬೆಳೆ ಹಾನಿಯನ್ನು ತಡೆಗಟ್ಟಲು ಎಲ್ಲಾ ಹೊಲಗಳಲ್ಲಿ ಮತ್ತು ಕೃಷಿಭೂಮಿ ಸುತ್ತಲೂ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಹೆಚ್ಚಿನ ಆರ್ದ್ರತೆಯೊಂದಿಗೆ ಮೋಡ ಕವಿದ ಆಕಾಶವು ಕಾಫಿ ಮೆಣಸು ಮತ್ತು ಭತ್ತದಂತಹ ಬೆಳೆಗಳಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ರೋಗಗಳನ್ನು ಉತ್ತೇಜಿಸುವ ಸಾಧ್ಯತೆಯಿದೆ - ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ ಮತ್ತು ತಡೆಗಟ್ಟುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಗಾಳಿಯಾಡುವಿಕೆಯನ್ನು ಸುಧಾರಿಸಲು ಮತ್ತು ರೋಗದ ಒತ್ತಡವನ್ನು ಕಡಿಮೆ ಮಾಡಲು ತೋಟ ಬೆಳೆಗಳ (ಕಾಫಿ ಮೆಣಸು) ರೋಗಪೀಡಿತ ಮತ್ತು ಮಿತಿಮೀರಿ ಬೆಳೆದ ಭಾಗಗಳನ್ನು ಕತ್ತರಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.